Advertisement


ಭಾರತದ ಬಾಹ್ಯಾಕಾಶ ಇತಿಹಾಸ ದ ಅಮೃತ ಗಳಿಗೆಯನ್ನು ಇತಿಹಾಸದ ಪುಟಗಳಲ್ಲಿ ದಾಖಲಿಸಿದ ಚಂದ್ರಯಾನ -3 ವಿಕ್ರಂ ಲ್ಯಾಂಡರ್ ಯಶಸ್ವಿಯಲ್ಲಿ ನೂರಾರು ವಿಜ್ಞಾನಿಗಳ, ಸಂಶೋಧನಾ ನಿರತ ವಿದ್ಯಾರ್ಥಿಗಳ ಪಾತ್ರ ಬಹಳ ಪ್ರಾಮುಖ್ಯವಾದದ್ದು, ಈ ನಿಟ್ಟಿನಲ್ಲಿ ಇಸ್ರೋ ಸಂಶೋಧನಾ ವಿದ್ಯಾರ್ಥಿನಿಯಾಗಿ ಕಾರ್ಯ ನಿರ್ವಹಿಸಿದ ಸುಳ್ಯ ತಾಲೂಕಿನ ಮಾನಸ ಜಯಕುಮಾರ್ ಇವರನ್ನು ಮಲೆನಾಡು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವಾರ್ಪಣೆ ಮಾಡಲಾಯಿತು
ಡಾ. ಶ್ರೀನಿಧಿ ಮಾನಸ ರನ್ನು ಸನ್ಮಾನಿಸಿದರು
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸದ್ದ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಮಾತನಾಡಿ ಇತ್ತೀಚೆಗೆ ದೇಶ -ವಿದೇಶ ಗಳಲ್ಲಿ ಜರಗುವ ಯಾವುದೇ ಸಾಧನೆಯಲ್ಲಿ ಸುಳ್ಯಮೂಲದವರು ಭಾಗಿಯಾಗುತ್ತಿರುವುದು ನಮ್ಮ ನಾಡಿನ ಪ್ರೌಡಿಮೆ, ಜಗತ್ತೆ ಕೊಂಡಾಡಿದ ಚಂದ್ರಯಾನ 3 ಸಾಧನೆಯಲ್ಲಿ ಸುಳ್ಯದ ಮೂವರು ವಿಜ್ಞಾನಿಗಳ ಪಾತ್ರ ಅಭಿನಂದನೀಯ
ಮಾನಸ ಜಯಕುಮಾರ್ ಇಸ್ರೋ ಸಂಶೋಧನಾ ವಿದ್ಯಾರ್ಥಿನಿಯಾಗಿ, ಚಂದ್ರ ಯಾನ -3 ರ ಅಂಗವಾಗಿ ಅಹಮದಾಬಾದಲ್ಲಿ ನಡೆದ ಯೋಜನಾ ಕಾರ್ಯಾಗಾರದಲ್ಲಿ ಭಾಗವಹಿಸಿ ಪ್ರಶoಶಿಲ್ಪಟ್ಟಿ ದ್ದರು ಉಪಗ್ರಹ ಆoಟೇ ನಾ ರಚಿಸಿದ ತಂಡದಲ್ಲಿ ಪ್ರಮುಖ ಪಾತ್ರವಹಿಸಿದವರು ಎಂದರು
ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯ ಕೆ. ಎಂ. ಮುಸ್ತಫ, ಟ್ರಸ್ಟ್ ಅಧ್ಯಕ್ಷ, ನಗರ ಪಂಚಾಯತ್ ಸದಸ್ಯ ರಿ ಯಾಜ್ ಕಟ್ಟೆಕ್ಕಾರ್ಸ್, ಖ್ಯಾತ ಜ್ಯೋತಿಷಿ ಮಹಾಲಿಂಗೇಶ್ವರ ಶರ್ಮ,ತೋಟ ತೊಯಿಲಾಲಿ ಸಂಘ ದ ಕುಮಾರ್ ಕೆಎಫ್ ಡಿಸಿ
ಹನೀಫ್ ಕುಂಡಿಲ್, ಹನೀಫ್ ಎಕೆಬಿ, ಸಂತೋಷ್ ಕೇರ್ಪಳ, ದೇವಿಪ್ರಸಾದ್ ಶ್ರೀನಿವಾಸ್ ಕಾಲೇಜು ಮೊದಲಾವರು ಉಪಸ್ಥಿತರಿದ್ದರು,ಮಾನಸ ರವರು ಸುಳ್ಯ ಮೂಲದ ಬಾಲಕೃಷ್ಣ ಮತ್ತು ಕುಸುಮ ದಂಪತಿಗಳ ಪುತ್ರಿ, ಪತಿ ಜಯಕುಮಾರ್ ರವರೊಂದಿಗೆ ಮಂಗಳೂರಿನಲ್ಲಿ ವಾಸ್ತವ್ಯ ಹೊಂದಿರುತ್ತಾರೆ

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ