Advertisement

ಬುಡಾಪೆಸ್ಟ್: ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ (World Athletics Championship) ಜಾವೆಲಿನ್ ಥ್ರೋನಲ್ಲಿ (Javelin Throw) ಭಾರತದ ನೀರಜ್ ಚೋಪ್ರಾ (Neeraj Chopra) ಚಿನ್ನ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಪಾಕಿಸ್ತಾನದ (Pakistan) ಅರ್ಷದ್ ನದೀಮ್ (Arshad Nadeem) 2ನೇ ಸ್ಥಾನ ಪಡೆದು ಬೆಳ್ಳಿ ಗೆದ್ದಿದ್ದಾರೆ. ಐತಿಹಾಸಿಕ ಸಾಧನೆಯಲ್ಲೂ ನೀರಜ್ ಚೋಪ್ರಾ ಪಾಕಿಸ್ತಾನದ ಪ್ರತಿಸ್ಪರ್ಧಿಯ ಸಾಧನೆಯನ್ನೂ ಕೊಂಡಾಡಿದ್ದಾರೆ. ಈ ಹಿಂದೆ ಜಾವೆಲಿನ್ ಎಸೆತದಲ್ಲಿ ಯುರೋಪಿಯನ್ ರಾಷ್ಟ್ರಗಳಷ್ಟೇ ಮುಂದಿದ್ದವು. ಆದರೆ ಇದೀಗ ಭಾರತ ಹಾಗೂ ಪಾಕಿಸ್ತಾನವೂ ಆ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನೀರಜ್ ಚೋಪ್ರಾ, ನಾನು ಸ್ಪರ್ಧೆಗೂ ಮುನ್ನ ನನ್ನ ಮೊಬೈಲ್ ಅನ್ನು ಹೆಚ್ಚು ಬಳಸುವುದಿಲ್ಲ. ಆದರೆ ಇಂದು ನಾನು ನೋಡಿದೆ. ಈ ವೇಳೆ ನನ್ನ ಗಮನಸೆಳೆದ ಮೊದಲ ವಿಷಯವೆಂದರೆ ಭಾರತ ಮತ್ತು ಪಾಕಿಸ್ತಾನ. ಯುರೋಪಿಯನ್ ಅಥ್ಲೀಟ್‌ಗಳು ತುಂಬಾ ಅಪಾಯಕಾರಿ ಮತ್ತು ಯಾವುದೇ ಸಮಯದಲ್ಲಿ ದೊಡ್ಡ ಮುನ್ನಡೆ ಸಾಧಿಸಬಹುದು. ಹೀಗಾಗಿ ನಾವು ಕೊನೆಯ ಎಸೆತದವರೆಗೂ ಇತರ ಸ್ಪರ್ಧಿಗಳ ಬಗ್ಗೆ ಯೋಚಿಸುತ್ತಲೇ ಇರಬೇಕಾಗುತ್ತದೆ. ಆದರೆ ಈ ಬಾರಿ ಭಾರತ ಮತ್ತು ಪಾಕಿಸ್ತಾನದ ಹೋಲಿಕೆ ಮನೆಯಂತಹ ಅನುಭವ ನೀಡಿತು ಎಂದು ಚೋಪ್ರಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತದೆ. ಆದರೆ ನಾನು ಅದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಸಾಮಾನ್ಯವಾಗಿ ಐರೋಪ್ಯ ರಾಷ್ಟ್ರಗಳು ಪ್ರಾಬಲ್ಯ ಮೆರೆದಿದ್ದ ಸಂದರ್ಭದಲ್ಲಿ ಭಾರತ ಹಾಗೂ ಪಾಕಿಸ್ತಾನ ಮಾಡಿರುವ ಸಾಧನೆ ಮುಖ್ಯವಾದುದು. ಭಾರತ ಹಾಗೂ ಪಾಕಿಸ್ತಾನ ದೊಡ್ಡ ಸ್ಥಾನವನ್ನು ಗಳಿಸಿರುವುದನ್ನು ನೋಡಲು ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.  ಅರ್ಷದ್ ತುಂಬಾ ಚೆನ್ನಾಗಿ ಸ್ಪರ್ಧಿಸಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ನಮ್ಮ ಎರಡೂ ದೇಶಗಳು ಈಗ ಹೇಗೆ ಬೆಳೆಯುತ್ತಿವೆ ಎಂದು ನಾವು ಚರ್ಚಿಸಿದ್ದೇವೆ. ಮೊದಲು ಈ ಸ್ಥಾನಕ್ಕೆ ಯುರೋಪಿಯನ್ ಕ್ರೀಡಾಪಟುಗಳಷ್ಟೇ ಬರಲು ಸಾಧ್ಯವಿತು. ಈಗ ನಾವು ಆ ಮಟ್ಟವನ್ನು ತಲುಪಿದ್ದೇವೆ ಎಂದು ನೀರಜ್ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತದ ಬೀರಜ್ ಹಾಗೂ ಪಾಕಿಸ್ತಾನದ ಅರ್ಷದ್ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಬಲ್ಲಿ ಭಾರೀ ಪೈಪೋಟಿ ನಡೆಸಿದ್ದಾರೆ. ನೀರಜ್ ಫೈನಲ್‌ನಲ್ಲಿ ಜಾವೆಲಿನ್ ಅನ್ನು 88.17 ಮೀ. ದೂರ ಎಸೆದು ವಿಜಯಿಯಾದರೆ, ಅರ್ಷದ್ 87.82 ಮೀ. ಎಸೆದು 2ನೇ ಸ್ಥಾನ ಪಡೆದಿದ್ದಾರೆ

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ