ಸುಳ್ಯ ತಾಲೂಕು ಕೆ.ಡಿ.ಪಿ ಸದಸ್ಯರಾಗಿ ಅರಂತೋಡಿನ ಸಾಮಾಜಿಕ ಕಾರ್ಯಕರ್ತ ಅಶ್ರಫ್ ಗುಂಡಿ ಆಯ್ಕೆಯಾಗಿದ್ದಾರೆ.
ಅಶ್ರಫ್ ಗುಂಡಿಯವರು 2 ಬಾರಿ ಅರಂತೋಡು ಗ್ರಾಮ ಪಂಚಾಯತ್ ಸದಸ್ಯರಾಗಿ ಒಂದು ಬಾರಿ ಉಪಾಧ್ಯಕ್ಷರಾಗಿ, ಅರಂತೊಡು- ತೊಡಿಕಾನ ಸಹಕಾರಿ ಸಂಘದ ನಿರ್ದೇಶಕರಾಗಿ, ರೋಟರಿ, ಗ್ರಾಮೀಣದಳ, ಯುವಕ ಮಂಡಲ, ಅನ್ವಾರುಲ್ ಹುಧಾ ಎಸೋಸಿಯೇಶನ್, ಸುಳ್ಯ ತಾಲೂಕು ಜಮೀಯತ್ತುಲ್ ಫಲಾಹ್ ನ ಪ್ರಧಾನ ಕಾರ್ಯದರ್ಶಿಯಾಗಿ, ವಲಯ ಕಾಂಗ್ರೆಸ್, ಸುಳ್ಯ ಬ್ಲಾಕ್ ಕಾಂಗ್ರೆಸ್, ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಸುಳ್ಯ ಬ್ಲಾಕ್ ಸೇವಾದಳದ ಅಧ್ಯಕ್ಷರಾಗಿ ಬೆಳಗಾಂನಲ್ಲಿ ನಡೆದ ಕಾಂಗ್ರೆಸ್ ಸೇವಾದಳದ ರಾಷ್ಟ್ರೀಯ ತರಬೇತು ಶಿಬಿರದಲ್ಲಿ ತರಬೇತಿಯನ್ನು ಪಡೆದುಕೊಂಡಿರುತ್ತಾರೆ. ಪ್ರಸ್ತುತ ಪಾಪ್ಯುಲರ್ ಎಜ್ಯುಕೇಶನ್ ಸೊಸೈಟಿಯ ನಿರ್ದೇಶಕರಾಗಿ, ಸುಳ್ಯ ಸಮಸ್ತ ಸಂಯುಕ್ತ ಜಮಾಅತ್ ನ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಅರಂತೋಡು ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.