Advertisement


ಎರಡು ದಿನಗಳಿಂದ ದ. ಜಿಲ್ಲಾ ಪ್ರವಾಸದಲ್ಲಿರುವ ಕಂದಾಯ ಸಚಿವರಾದ ಬೈರೇಗೌಡರು ದ. ಕ. ಜಿಲ್ಲಾ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡಿದರು
ಈ ಸಂದರ್ಭದಲ್ಲಿ ಭಾಷಣಕ್ಕೆ ಮುಂದಾಗದೆ ಸಮಸ್ಯೆಗಳ ಬಗ್ಗೆ ಸಂವಾದ ನಡೆಸುವಂತೆ ಸೂಚಿಸಿದರು
ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಕಂದಾಯ ಇಲಾಖೆಗೆ ಸಂಬಂದಿಸಿದ ಕೆಲವು ಸಮಸ್ಯೆಗಳಾದ ಅಕ್ರಮ -ಸಕ್ರಮ ಪ್ಲಾಟಿಂಗ್, ಭೂ ಮಂಜೂರಾತಿಗೆ ಅರಣ್ಯ ಇಲಾಖೆಯ ಸಮಸ್ಯೆಗಳು, ಭೂ ಪರಿವರ್ತನೆ ಬಗ್ಗೆ ಇರುವ ಸಮಸ್ಯೆಗಳು, ಧಾರ್ಮಿಕ ಸಂಸ್ಥೆಗಳ ಧಫನ ಭೂಮಿ ಸಮಸ್ಯೆಗಳು, ಸರ್ವೆ ಸೆಟ್ಲ್ ಮೆಂಟ್, ಪಹಣಿ ದಾಖಲಾತಿ ಇನ್ನಿತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ತಮ್ಮ ಜಿಲ್ಲಾ ಭೇಟಿ ಯಿಂದ ಸಮಸ್ಯೆಗಳಿಗೆ ಪರಿಹಾರ ದೊರಕುವ ಭರವಸೆ ಇದೆ ಎಂದು ಹೇಳಿ ಮನವಿ ಅರ್ಪಿಸಿದರು
ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು
ದ. ಕ. ಜಿಲ್ಲೆಯಲ್ಲಿ ಪ್ರತ್ಯೇಕವಾದ ಮತ್ತು ವಿಶಿಷ್ಟವಾದ ಅನೇಕ ಸಮಸ್ಯೆಗಳಿವೆ, ಮಧ್ಯಾಹ್ನ ನಂತರ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಬಹುತೇಕ ಸಮಸ್ಯೆಗಳಿಗೆ ಆದೇಶ ನೀಡುವ ಪ್ರಯತ್ನ ಮಾಡುತ್ತೇನೆ ಎಂದರು
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರು ಗಳಾದ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ,ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾಜಿ ಶಾಸಕ ಜೆ. ಅರ್. ಲೋಬೊ,ಮಾಜಿ ಜಿ. ಪಂ. ಸದಸ್ಯ ಶಾಹುಲ್ ಹಮೀದ್, ಮೊದಲಾವರು ಉಪಸ್ಥಿತರಿದ್ದರು

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ