ಆಗಸ್ಟ್ 31ರಂದು ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓಣಂ ಹಬ್ಬವನ್ನು ಸಡಗರ ಸಂಭ್ರಮದಿಂದ ಸಾಂಪ್ರದಾಯಿಕವಾಗಿ ಆಚರಿಸಲಾಯಿತು.ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತಾವು ಸಂಗ್ರಹಿಸಿದ ಹೂವುಗಳನ್ನು ಉಪಯೋಗಿಸಿ ಪೂಕಳಂ (ಹೂವಿನ ರಂಗೋಲಿ) ಬಿಡಿಸಿದರು. ಓಣಂ ಗೀತೆಯನ್ನು ಪ್ರಸ್ತುತಪಡಿಸುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.ಶಾಲಾ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ಶುಭ ಹಾರೈಸಿದರು. ಹಬ್ಬದ ಅಂಗವಾಗಿ ಆಟ, ವರ್ಣ ರಂಜಿತ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಆಚರಣೆಗೆ ಸಂಬಂಧಿಸಿದಂತೆ ಓಣಂ ಔತಣವನ್ನು ಏರ್ಪಡಿಸಲಾಯಿತು. ಹಾಗೂ ಅರಂತೋಡು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2023-24 ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಈ ಸಂದರ್ಭ ಶಾಲಾ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್, ಆಡಳಿತ ಮಂಡಳಿಯ ಅಧ್ಯಕ್ಷರಾದ
ಉನೈಸ್ ಪೆರಾಜೆ, ಗೌರವಾಧ್ಯಕ್ಷ ತಾಜ್ ಮಹಮ್ಮದ್, ಆಡಳಿತ ಮಂಡಳಿಯ ಸದಸ್ಯ ಉಮ್ಮರ್ ಹಾಜಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿನಕರ ಸಣ್ಣಮನೆ, ಶಾಲಾ ಮುಖ್ಯೋಪಾಧ್ಯಾಯರಾದ ಸಂಪತ್ ಜೆ ಡಿ, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
Advertisement
Advertisement