ಸುಳ್ಯ : ಯಶಸ್ವೀ ಚಂದ್ರಯಾನ 3 ರ ತಂಡದಲ್ಲಿ ಕಾರ್ಯ ನಿರ್ವಹಿಸಿದ ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಹಿರಿಯ ವಿದ್ಯಾರ್ಥಿ ವೇಣುಗೋಪಾಲ್ ಭಟ್ ಉಬರಡ್ಕ ರವರನ್ನು ಕೆ.ವಿ.ಜಿ.ಪಾಲಿಟೆಕ್ನಿಕ್ ನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಕೆ.ವಿ.ಜಿ. ಪಾಲಿಟೆಕ್ನಿಕ್ ನ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ. ಉಜ್ವಲ್ ಯು.ಜೆ ಸಮಾರಂಭದ ಅಧ್ಯಕ್ಷತೆ ವಹಿಸಿ, ಸನ್ಮಾನ ನೆರವೇರಿಸಿ ಮಾತನಾಡಿ ಇಸ್ರೋ ಸಂಸ್ಥೆಯಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸಹಯೋಗ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತೆ ವಿನಂತಿಸಿದರು.
ಸನ್ಮಾನ ಸ್ವೀಕರಿಸಿದ ವೇಣುಗೋಪಾಲ್ ಭಟ್ ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡು ಇಸ್ರೋ ಸಂಸ್ಥೆಯ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ತನಗೆ ವಿದ್ಯಾಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟ ಡಾ.ಕುರುಂಜಿ ವೆಂಕಟ್ರಮಣ ಗೌಡರನ್ನು ಸ್ಮರಿಸಿದರು.
ಸಮಾರಂಭದ ವೇದಿಕೆಯಲ್ಲಿ ಪ್ರಾಂಶುಪಾಲ ಜಯಪ್ರಕಾಶ ಕೆ, ಅಕಾಡೆಮಿಕ್ ಡೀನ್ ಚಂದ್ರಶೇಖರ ಎಂ.ಎನ್, ಹಿರಿಯ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಶೈಲೇಶ್ ಅಂಬೆಕಲ್, ವಿಭಾಗ ಮುಖ್ಯಸ್ಥರುಗಳಾದ ದೇವರಾಜ್ ಜಿ.ಕೆ, ಸತ್ಯನಾರಾಯಣ ಪ್ರಸಾದ್, ರಮಾದೇವಿ, ಪ್ರದೀಪ್ ಕುಮಾರ್, ಡೆಂಟಲ್ ಕಾಲೇಜಿನ ಆಡಳಿತಾಧಿಕಾರಿ ಮಾಧವ ಬಿ.ಟಿ, ಐಟಿಐ ಆಡಳಿತಾಧಿಕಾರಿ ಭವಾನಿಶಂಕರ ಅಡ್ತಲೆ, ವಿದ್ಯಾರ್ಥಿ ಸಂಘದ ನಾಯಕರಾದ ತಾಜುದ್ದೀನ್ ಹಾಗೂ ಚರಣ್ ರಾಜ್ ಉಪಸ್ಥಿತರಿದ್ದರು. ಚಂದ್ರಶೇಖರ ಬಿಳಿನೆಲೆ ಸ್ವಾಗತಿಸಿ ವಂದಿಸಿದರು.
Advertisement
Advertisement