ಸುಳ್ಯ: ಜನವರಿ 21 ಇಲ್ಲಿನ ರಥ ಬೀದಿಯಿಂದ ಆರಂಭಗೊಂಡು, ರಾಜ್ಯ ಹೆದ್ದಾರಿಯನ್ನು ಒಳಗೊಂಡು ಆಲೆಟ್ಟಿ ರಸ್ತೆಯಲ್ಲಿರುವ ಪಂಪ್ ಹೌಸ್ ವರೆಗಿನ ರಸ್ತೆಯನ್ನು ಭೂಗರ್ಭ ಪೈಪ್ ಲೈನ್ ಕಾಮಗಾರಿ ಉದ್ದೇಶದಿಂದ ಅಗೆದುದರಿಂದ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸವಾರರು ಬಹಳಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ, ಆದುದರಿಂದ ರಸ್ತೆಯನ್ನು ಕೂಡಲೇ ದುರಸ್ಥಿಗೊಳಿಸುವಂತೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ಬ್ಲಾಕ್ ಸಮಿತಿ ವತಿಯಿಂದ ನಗರ ಪಂಚಾಯತ್ ಕಾರ್ಯನಿರ್ವಾಹನಾಧಿಕಾರಿ ಯವರಿಗೆ ಮನವಿ ನೀಡುವ ಮೂಲಕ ವಿನಂತಿಸಲಾಯಿತು. ಮೊದಲೇ ವಾಹನ ದಟ್ಟಣೆಯಿಂದ ಸವಾರರು ತೊಂದರೆಗಳು ಅನುಭವಿಸುತ್ತಿದ್ದು, ರಸ್ತೆಯನ್ನು ಅಗೆದು ಸರಿ ಮಾಡದೆ ಈಗ ಮತ್ತಷ್ಟು ತೊಂದರೆಯಾಗುತ್ತಿದೆ.
ತಾವುಗಳು ಕೂಡಲೇ ಎಚ್ಚೆತ್ತುಕೊಂಡು ರಸ್ತೆಯನ್ನು
ದುರಸ್ತಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಈ ಮೂಲಕ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಸುಳ್ಯ ಬ್ಲಾಕ್ ಎಸ್ ಡಿ ಪಿ ಐ ಅಧ್ಯಕ್ಷರಾದ ಮೀರಜ್ ಸುಳ್ಯ, ಉಪಾಧ್ಯಕ್ಷರಾದ ಸಲೀಂ ಗೂನಡ್ಕ, ಕಾರ್ಯದರ್ಶಿ ಸುಹೈಲ್ ಸುಳ್ಯ, ಸದಸ್ಯರಾದ ಸಿದ್ದೀಕ್ ಸಿ. ಎ ಮುಂತಾದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *