ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಯಥಾವತ್ ಅನುಷ್ಠಾನದಿಂದ ಆರ್ಥಿಕ ಪುನಸ್ಚೇತನ :ರೈ
ಕೆಪಿಸಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಧನಂಜಯ ಅಡಪಂಗಾಯರ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ರಮನಾಥ ರೈ ಯವರು ಉದ್ಯಮಿ ಅಬ್ದುಲ್ ಲತೀಫ್ ಹರ್ಲಡ್ಕರವರ ನಿವಾಸಕ್ಕೆ ಭೇಟಿ ನೀಡಿದರು
ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಕೆಪಿಸಿಸಿ ಸಂಯೋಜಕ ಎಸ್. ಸಂಶುದ್ದೀನ್, ಅನ್ಸಾರಿಯಾ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಇಂಟಕ್ ಅಧ್ಯಕ್ಷ ಶಾಫಿ ಕುತ್ತಾ ಮೊಟ್ಟೆ ರೈಯವರನ್ನು ಸನ್ಮಾನಿಸಿದರು
ಸನ್ಮಾನ ಸ್ವೀಕರಿಸಿ ಮಾತನಾಡಿದ ರೈ ಯವರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜೀವನ ಭದ್ರತೆಗೆ ನೀಡಿದ ಗ್ಯಾರಂಟಿಗಳಾಗಿವೆ, ಶಾಂತಿ ಕದಡುವವರ ವಿರುದ್ಧ ಸರಕಾರ ಕಠಿಣ ನಿಲುವು ತಳೆಯಲಿದೆ ಎಂದರು ಈ ಸಂದರ್ಭದಲ್ಲಿ ಉದ್ಯಮಿ ಯೂಸುಫ್ ಎಲಿಮಲೆ, ಹಮೀದ್ ಕಡಬ ಮೊದಲಾದವರು ಉಪಸ್ಥಿತರಿದ್ದರು

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ