Advertisement

ಸುಳ್ಯ ತಾಲೂಕಿನ ಹಲವೆಡೆ ಮಗದೊಮ್ಮೆ ಭೂಮಿ ಕಂಪಿಸಿದೆ. ಇಂದು‌ ಬೆಳಿಗ್ಗೆ ಸುಮಾರು ಗಂಟೆ 7:45 ಕ್ಕೆ ಲಘು ಭೂಕಂಪನದ ಅನುಭವವಾಗಿದೆ. ಸುಳ್ಯ ಅಸುಪಾಸಿನ ಉಬರಡ್ಕ, ಮಡಪ್ಪಾಡಿ, ಕೊಲ್ಲಮೊಗ್ರ, ದೇವಚಳ್ಳ, ಆಲೆಟ್ಟಿ ಪೆರಾಜೆ, ಪೈಚಾರ್, ಶಾಂತಿನಗರ ಈ ಪ್ರದೇಶಗಳಲ್ಲಿ ಕಂಪನದ ಅನುಭವವಾದ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಸಂಪಾಜೆ ಭಾಗದಲ್ಲಿ ಅಲ್ಪ ಅಧಿಕ ಪ್ರಮಾಣದ ಕಂಪನ ಅನುಭವವಾಗಿದೆ ಎಂದು ತಿಳಿದುಬಂದಿದೆ. ಸಾರ್ವಜನಿಕರಲ್ಲಿ ಆತಂಕದ ಸೃಷ್ಟಿಯಾಗಿದೆ.

ದೂರದಿಂದ ಸಿಡಿಲಿನ ಶಬ್ದ ದ ಹಾಗೆ ಕೇಳುತ್ತಿತ್ತು
ಕಾಕತಾಳಿಯ ಏನೋ ಕೆಲವು ನಾಯಿಗಳು ಕೂಡ ಬೊಗಳಿದವು ಎಂದು ಭೂಮಿ ಕಂಪಿಸಿದ ಅನುಭವ ಕುರಿತು‌ ಸಾರ್ವಜನಿಕರು ವಿಶ್ಲೇಷಿಸುತ್ತಿದ್ದಾರೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ