ಸುಳ್ಯ ನಗರ ವ್ಯಾಪ್ತಿಯಲ್ಲಿ 2013 ರ ನಂತರ ನಗರ ಯೋಜನಾ ಪ್ರಾಧಿಕಾರದ ಅನುಮೋದನೆಯ ಕಾನೂನು ಅನ್ವಯಿಸಲಾಗುತ್ತಿದ್ದು, ಅದಕ್ಕೆ ಮುಂಚಿತವಾಗಿ ಭೂ ಪರಿವರ್ತನೆ ಗೊಂಡ ನಿವೇಶನಗಳು ಆ ಸಮಯದಲ್ಲಿ ಇರುವ ಕಾನೂನಿನoತೆ ವ್ಯವಹರಣೆ ಗೊಂಡಿರುತ್ತದೆ, ಸದ್ರಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ,ದುರಸ್ತಿ, ವಿಸ್ತರಣೆ, ಫಾರಂ 3 ಖಾತೆ, ಪರಭಾರೆ ಮೊದಲಾದ ಕಾರ್ಯಗಳಿಗೆ ಸೂಡ ಅನುಮೋದನೆ ಪಡೆಯುವುದು ಅಸಾಧ್ಯವಾಗಿರುತ್ತದೆ

, ಆದ್ದರಿಂದ 2013 ಕಟ್ ಆಫ್ ದಿನಾಂಕ ನಿಗದಿಪಡಿಸಿ, ಭೂಮಿದಾ ಖಲೆ ಗಳನ್ನು, ಖಾತೆಗಳನ್ನು ನೀಡಲು 2013 ಕ್ಕಿಂತ ಮುಂಚಿತವಾಗಿ ಕನ್ವರ್ಷನ್ ಆದ ಭೂಮಿ, ನಿರ್ಮಾಣ ಗಳ ಅಭಿವೃದ್ಧಿಗೆ ಸೂಡ ನಿಯಮಗಳಿಂದ ವಿನಾಯಿತಿ ನೀಡಿ, ನಗರ ಪಂಚಾಯತ್ ನಲ್ಲಿಯೇ ಈ ಬಗ್ಗೆ ಖಾತೆ ಮತ್ತು ಕಟ್ಟಡ ಪರವಾನಿಗೆ, ಅಭಿವೃದ್ಧಿ ಗೆ ಅನುಮತಿ ನೀಡಲು ಸೂಕ್ತ ಕ್ರಮ ಕೈಗೊಂಡು ಆದೇಶ ನೀಡಬೇಕಾಗಿ ಮನವಿಯಲ್ಲಿ ವಿನಂತಿಸಲಾಗಿದೆ
ಈ ಸಂದರ್ಭದಲ್ಲಿ , ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸಂಶುದ್ದೀನ್, ಮಾಜಿ ಸದಸ್ಯ ಕೆ. ಎಂ. ಮುಸ್ತಫ, ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ