ಸುಳ್ಯ : ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ವಿದ್ಯಾರ್ಥಿ ಸಂಘಗಳ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ ಅಧ್ಯಕ್ಷತೆ ವಹಿಸಿ ಎಲ್ಲಾ ಸಿಬ್ಬಂದಿಗಳಿಗೆ ವಿದ್ಯಾರ್ಥಿಗಳ ವತಿಯಿಂದ ಸ್ಮರಣಿಕೆ ವಿತರಿಸಿದರು, ಶಿಕ್ಷಕರ ಪರವಾಗಿ ಅಕಾಡಮಿಕ್ ಡೀನ್ ಚಂದ್ರಶೇಖರ ಎಂ.ಎನ್. ಮಾತನಾಡಿದರು. ವಿದ್ಯಾರ್ಥಿಗಳ ಪರವಾಗಿ ಅಕ್ಷಯ್ ಕುಮಾರ್, ಶುಭಾ ಪಿ.ನ್ ಹಾಗೂ ರಕ್ಷಿತಾ ಡಿ.ಎ ಮಾತನಾಡಿದರು. ವೇದಿಕೆಯಲ್ಲಿ ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ಚಂದ್ರಶೇಖರ ಬಿಳಿನೆಲೆ, ಸುನಿಲ್ ಕುಮಾರ್ ಎನ್.ಪಿ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹಮ್ಮದ್ ತಾಜುದ್ದೀನ್, ಕಾರ್ಯದರ್ಶಿ ಚರಣ್ ರಾಜ್, ಎನ್ನೆಸ್ಸೆಸ್ ಘಟಕ ನಾಯಕರಾದ ದರ್ಶನ್ ಎಂ.ಪಿ, ರಾಜೇಶ್ ಬಿ, ಜೇಷ್ಮಾ ಎಸ್.ಬಿ, ರಕ್ಷಿತಾ ಡಿ.ಎ, ರೆಡ್ ಕ್ರಾಸ್ ನಾಯಕರಾದ ಲಿಖಿತ್ ಎಸ್.ಆರ್ ಮತ್ತು ತೇಜಶ್ರೀ ಎಂ. ಉಪಸ್ಥಿತರಿದ್ದರು.
ಸ್ವಯಂ ಸೇವಕಿ ಜೀನಾ ಸ್ವಾಗತಿಸಿ, ವೈಶಾಲಿ ವಂದಿಸಿದರು, ಜೇಷ್ಮಾ ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭದ ನಂತರ ಶಿಕ್ಷಕರಿಗೆ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳನ್ನು ಅಯೋಜಿಸಿ ಬಹುಮಾನ ವಿತರಿಸಿದರು.
Advertisement
Advertisement