Advertisement
ಸುಳ್ಯ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆಗಿರುವ ಬಾಲಕೃಷ್ಣ ಗೌಡ (57 ವರ್ಷ) ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಹಲವು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಅಧಿಕಾರಿ ಎಂದು ಹೆಸರು ಮಾಡಿದ್ದರು ಈ ಬಾಲಕೃಷ್ಣ ಗೌಡರು. ಮೂಲತಃ ದುಗ್ಗಲಡ್ಕದ ಕುಂಬೆತ್ತಿಬನ ನಿವಾಸಿಯಾಗಿದ್ದಾರೆ. ಪುತ್ತೂರು DYSP ಕಚೇರಿಯಲ್ಲಿ ಒಒಡಿಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳಿದ್ದ ಬಾಲಕೃಷ್ಣ ಗೌಡರು ಮನೆಯವರ ಜೊತೆ ಎಂದಿನಂತೆ ನಗುನಗುತ್ತಾ ಮಾತನಾಡಿದ್ದರು. ಊಟ ಮಾಡಿ ಖುಷಿಯಾಗಿಯೇ ನಿದ್ದೆಗೆ ಜಾರಿದ್ದರು. ಆದರೆ ಶನಿವಾರ ಮುಂಜಾನೆ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ. ತಕ್ಷಣ ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟರು ಎಂದು ತಿಳಿದು ಬಂದಿದೆ. ಮೃತರು ಪತ್ನಿ ಮೀನಾಕ್ಷಿ, ಪುತ್ರರಾದ ಹೇಮಂತ್, ಜಯಂತ್, ಸಹೋದರ ಬಾಲಚಂದ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Advertisement