Advertisement
ದ. ಕ. ಜಿಲ್ಲೆ ಸುಳ್ಯದಲ್ಲಿ ಕೆಜಿ ಯಿಂದ ಪಿಜಿ ವರೆಗೆ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು
ಎಲ್ಲಾ ರೀತಿಯ ತಾಂತ್ರಿಕ, ವೈದ್ಯಕೀಯ ಕಾಲೇಜುಗಳು ಇವೆ. ಇಲ್ಲಿಗೆ ವಿದ್ಯಾರ್ಜನೆಗೈಯ್ಯಲು ದೇಶದ, ರಾಜ್ಯದ ವಿವಿಧ ಮೂಲೆಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಿದ್ದಾರೆ. ದ. ಕ. ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯ ಇವೆ, ಆದರೆ ಸುಳ್ಯದಲ್ಲಿ ಇಲ್ಲ,
ಆದ್ದರಿಂದ ಅಲ್ಪಸಂಖ್ಯಾತ ಬಾಲಕ, ಬಾಲಕಿಯರ ವಸತಿ ನಿಲಯ ಮಂಜೂರು ಮಾಡುವಂತೆ ಶಿಫಾರಸು ಮಾಡಬೇಕಾಗಿ ಮಾನ್ಯ ವಿಧಾನಸಭಾಧ್ಯಕ್ಷ ರಾದ ಯು. ಟಿ. ಖಾದರ್ ರವರಿಗೆ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಹಾಗೂ ಸುಳ್ಯ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ಸ್ ಮನವಿ ಸಲ್ಲಿಸಿದರು
Advertisement