ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾ ಮಂಡಳ ಬೆಂಗಳೂರು ಇದರ ಆಡಳಿತ ಮಂಡಳಿಗೆ ಇಂದು (ಜ.28) ಚುನಾವಣೆ ನಡೆದಿದ್ದು, ನಿರ್ದೇಶಕರಾಗಿ ಸುಳ್ಯದ ಚಂದ್ರ ಕೋಲ್ಟಾರು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಪ್ರಸ್ತುತ ಚಂದ್ರ ಕೋಲ್ಟಾರು ರವರು ದ.ಕ.ಜಿಲ್ಲಾ ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರು ಜೇನು ಸೊಸೈಟಿ ಅಧ್ಯಕ್ಷರಾಗಿ,ವೆಂಕಟ್ರಮಣ ಕ್ರೇಡಿಟ್ ಕೋ ಅಪರೇಟಿವ್ ನಿರ್ದೇಶಕರಾಗಿ, ಗೌಡ ಯುವ ಸೇವಾ ಸಂಘ ಮತ್ತು ಬಿಜೆಪಿಯಲ್ಲಿ ಅನೇಕ ಜವಾಬ್ದಾರಿ ನಿರ್ವಹಿಸಿದ್ದರು.

ಮೈಸೂರು ವಿಭಾಗದಲ್ಲಿ ಒಟ್ಟು 71 ಸಹಕಾರ ಸಂಘಗಳು ಮಹಾಮಂಡಲಕ್ಕೆ ಸದಸ್ಯರಾಗಿದ್ದು, ಈ 71 ಮತದಾರ ಸಂಸ್ಥೆಗಳ ಪೈಕಿ 69 ಮಂದಿ ಪ್ರತಿನಿಧಿಗಳು ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು. 

   ಚುನಾವಣೆ ನಡೆದು ಮತ ಎಣಿಕೆ ನಡೆದಾಗ ಸುಳ್ಯದವರಾದ ಚಂದ್ರಾ ಕೋಲ್ಚಾರ್ ರವರು 41 ಮತಗಳನ್ನು ಪಡೆದು ಚುನಾಯಿತರಾದರು. 

ಎಚ್.ಅಶೋಕ್ ರಿಗೆ 58, ಚಂದ್ರಶೇಖರ್ ಎಸ್. ರವರಿಗೆ 57 ಮತಗಳು ಲಭಿಸಿ ವಿಜಯಿಗಳಾಗಿದ್ದಾರೆ. ಮೋಟಮ್ಮರಿಗೆ 25 ಮತಗಳು ಹಾಗೂ ಚಿತ್ತರಂಜನ್ ಬೋಳಾರರಿಗೆ 7 ಮತಗಳು ದೊರೆತು ಪರಾಭವಗೊಂಡರು.

Leave a Reply

Your email address will not be published. Required fields are marked *