Advertisement
ಶಾಲೆ ಮುಗಿಸಿ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿಗೆ ಆಂಬ್ಯುಲೆನ್ಸ್ ಡಿಕ್ಕಿ ಹೊಡೆದು ಗಾಯಗೊಂಡಿರುವ ಘಟನೆ ಸುಳ್ಯದ ಜಾಲ್ಸೂರಿನಲ್ಲಿ ಇಂದು ಸಂಜೆ (ಸೆ. 12) ಸಂಭವಿಸಿದೆ. ಇಂದು ಕನಕಮಜಲಿನಲ್ಲಿ ನಡೆದ ಅಪಘಾತದ ಗಾಯಾಳುವನ್ನು ಮಂಗಳೂರಿಗೆ ತಲುಪಿಸಿ, ಹಿಂತಿರುಗುತ್ತಿದ್ದ ಅದೇ ಅಂಬ್ಯುಲೆನ್ಸ್ ಬಾಲಕಿಗೆ ಡಿಕ್ಕಿಯಾಗಿದ್ದು ಗಾಯಗೊಂಡ ವಿದ್ಯಾರ್ಥಿನಿಯನ್ನು ಸುಳ್ಯದ ಆಸ್ಪತ್ರೆಗೆ ಕರೆ ತರಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನು ನಿರೀಕ್ಷಿಸಬೇಕಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
Advertisement