ಪ್ಲಾಟಿಂಗ್, ವಿದ್ಯುತ್, ದಫನ ಭೂಮಿ, ಸ್ಮಶಾನ, ಅಭಿವೃದ್ಧಿ ಅನುದಾನ ಮುಂತಾದ ಬೇಡಿಕೆಗಳಿಗೆ ಅರ್ಜಿ ಸಲ್ಲಿಸಿದ ಸುಳ್ಯ ಕ್ಷೇತ್ರದ ಜನತೆ

ಕರ್ನಾಟಕ ಸರಕಾರ ಇಂದು ರಾಜ್ಯದಾಧ್ಯoತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜನತಾ ದರ್ಶನ ಆಯೋಜಿಸಿದ್ದು ಇದರ ಅಂಗವಾಗಿ ಮಂಗಳೂರಿನ ಪುರಭವನದಲ್ಲಿ ಅರೋಗ್ಯ ಸಚಿವರು, ದ. ಕ. ಜಿಲ್ಲಾ ಉಸ್ತುವಾರಿ ಸಚಿವರು ಆದ ದಿನೇಶ್ ಗುಂಡೂರಾವ್ ಜನತಾ ದರ್ಶನ ನಡೆಸಿದರು,
ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ, ಸುಳ್ಯ ತಾಲೂಕಿನ ಹಲವು ಮುಖಂಡರುಗಳು ಭಾಗವಹಿಸಿ ಆಹವಾಲು ಸಲ್ಲಿಸಿದರು
ಸುಳ್ಯ ತಾಲೂಕು ರೆಡ್ ಕ್ರಾಸ್ ಉಪ ಸಭಾಪತಿ ಕೆ. ಎಂ. ಮುಸ್ತಫ ಮನವಿ ಸಲ್ಲಿಸಿ ಕೊಡಗು ಸಂಪಾಜೆ ಘಾಟ್, ಹಾಸನ ಜಿಲ್ಲೆಯ ಶಿರಾಡಿ ಘಾಟ್, ಕೇರಳ ರಾಜ್ಯದ ಕಾಸರಗೋಡು ಗಡಿಪ್ರದೇಶವಾದ ಸುಳ್ಯ ತಾಲೂಕು, ದಿನ ನಿತ್ಯ ಅಪಘಾತ, ಹೆರಿಗೆ ಮುಂತಾದ ಪ್ರಕರಣಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗುತ್ತಾ ಇದ್ದು ಅತೀ ಹೆಚ್ಚು ರಕ್ತದಾನಿಗಳು ಮತ್ತು ಬೇಡಿಕೆಗಳು ಹೊಂದಿರುವ ಸುಳ್ಯಕ್ಕೆ
ಸರಕಾರಿ ಬ್ಲಡ್ ಬ್ಯಾಂಕ್ ಅತೀ ಅವಶ್ಯ ವಾಗಿರುತ್ತದೆ ಆದ್ದರಿಂದ ಸುಳ್ಯ ತಾಲೂಕು ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೆಡ್ ಕ್ರಾಸ್ ಸಹಯೋಗದಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರಿಗೆ ಮನವಿ ಸಲ್ಲಿಸಲಾಯಿತು
ಪ್ರಪ್ರಥಬಾರಿಗೆ ನಡೆದ ಜನತಾದರ್ಶನದಲ್ಲಿ ಇಡೀ ಆಡಳಿತ ವ್ಯವಸ್ಥೆ ಭಾಗವಹಿಸಿ ತ್ತು, ಪ್ರತೀ ಇಲಾಖೆಗೆ ಪ್ರತ್ಯೇಕ ಕೌಂಟರ್, ಪ್ರತ್ಯೇಕ ಕಂಪ್ಯೂಟರ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು, ನೋಂದಣಿಯಾದ ಪ್ರತೀ ಅರ್ಜಿಗೆ ಪ್ರತ್ಯೇಕ ನಂಬರ್ ನೀಡಿ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳದಲ್ಲೇ ಇತ್ಯರ್ಥಗೊಳಿಸಳು ಸೂಚಿಸಲಾಗುತ್ತಿತ್ತು,

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ