Advertisement
ಸುಳ್ಯ: ಜಯನಗರ ಮೂಲದ ಯುವಕ ವ್ಯಾಪಾರಕ್ಕೆ ಹೋಗಿದ್ದ ಸಂದರ್ಭ, ಆ ಯುವಕನ ಕೈಯಿಂದ ಅಪರಿಚಿತರು ತಡರಾತ್ರಿ ಮೊಬೈಲ್ ಹಾಗೂ ಹಣ ಕದ್ದೊಯ್ಯ ಘಟನೆ ಹಾಸನದಲ್ಲಿ ನಡೆದಿದೆ.
ಸುಳ್ಯ ಜಯನಗರ ನಿವಾಸಿ ಪ್ರದೀಪ್ ಎಂಬಾತ ಹಾಸನದಲ್ಲಿ ಮಸಾಲೆ ಪದಾರ್ಥಗಳ ಲೈನ್ ಸೇಲ್ ಗೆಂದು ಹೋಗಿದ್ದ, ಸೋಮವಾರ ರಾತ್ರಿ ಒಂದು ಗಂಟೆಯ ವೇಳೆಗೆ ಬಸ್ಸಿನಿಂದ ಇಳಿದು ತನ್ನ ರೂಮಿಗೆ ಹೋಗುತ್ತಿದ್ದ ಸಂದರ್ಭ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಚೂರಿ ತೋರಿಸಿ ಆತನ ಬಳಿಯಿದ್ದ ಸುಮಾರು ₹20 ಸಾವಿರ ಬೆಲೆಬಾಳುವ ಮೊಬೈಲ್ ಫೋನ್ ಹಾಗೂ ಅವನ ಕೈಯಲ್ಲಿದ್ದ ₹300 ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ನಡೆದ ಘಟನೆಯನ್ನು ಆತ ದೂರವಾಣಿ ಮೂಲಕ ಸುಳ್ಯದಲ್ಲಿರುವ ತನ್ನ ಮಾಲಕರಿಗೆ ತಿಳಿಸಿದ್ದು, ಪೊಲೀಸರಿಗೆ ಮಾಹಿತಿ ನೀಡುವಂತೆ ಮಾಲಕರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
Advertisement