ಮಂಡ್ಯ: ರಸ್ತೆ ಪಕ್ಕ ನಿಂತಿದ್ದ ಕೆಎಸ್ಆರ್ಟಿಸಿ ಬಸ್ಗೆ (KSRTC Bus) ವೇಗವಾಗಿ ಬಂದ ಕಾರು (Car) ಹಿಂಬದಿಯಿಂದ ಡಿಕ್ಕಿಯೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಮಂಡ್ಯದ (Mandya) ನಾಗಮಂಗಲದ ಮೈ-ಬೆ ರಾಷ್ಟ್ರೀಯ ಹೆದ್ದಾರಿಯ ನಾಗಮಂಗಲದ (Nagamangala) ಬಳಿ ನಡೆದಿದೆ. ಹಾಸನದ (Hassan) ಕಡೆಯಿಂದ ಬೆಂಗಳೂರು ಕಡೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ನಾಗಮಂಗಲದ ಬಿಜೆಎಸ್ ಆಸ್ಪತ್ರೆ (BJS Hospital) ಮುಂಭಾಗ ನಿಂತಿತ್ತು. ಇದನ್ನು ಗಮನಿಸದೇ ಕಾರು ಚಾಲಕ ವೇಗವಾಗಿ ಬಂತು ಬಸ್ ಹಿಂಭಾಗಕ್ಕೆ ಡಿಕ್ಕಿಯೊಡೆದಿದ್ದಾನೆ. ಅಪಘಾತದ ರಭಸಕ್ಕೆ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. KA,02,MM 1802 ನಂಬರ್ ಸ್ವಿಫ್ಟ್ ಕಾರು ಬಸ್ಸಿಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಬೆಳ್ಳೂರು ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರನ್ನು ಬೆಂಗಳೂರಿನ ಬೆಂಡಿಗನಹಳ್ಳಿ ನಿವಾಸಿ ನಮಿತಾ, ರಾಜಸ್ಥಾನ ಮೂಲದ ಪಂಕಜ್ ಶರ್ಮಾ, ಬೆಂಗಳೂರಿನ ಹೊಸಕೋಟೆ ಮೂಲದ ವಂಶಿಕೃಷ್ಣ, ಧಾರವಾಡದ ರಘುನಾಥ್ ಭಜಂತ್ರಿ ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ