Advertisement


ಸರ್ವ ಧರ್ಮ ಸಾಮರಸ್ಯ, ತಂದೆ -ತಾಯಿಯ ಮತ್ತು ಬಡವರ ಸೇವೆಯ ಪ್ರವಾದಿಯವರ ಆದರ್ಶದ ಅನುಕರಣೆ ನಮ್ಮ ಪ್ರತಿಜ್ಞೆ ಯಾಗಲಿ :ಕೆ. ಎಂ. ಮುಸ್ತಫ

ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಫ (ಸ. ಅ ) ರವರ 1498 ನೇ ಜನ್ಮದಿನಾಚರಣೆಯ ಅಂಗವಾಗಿ 6 ದಿನಗಳ ಮದರಸ, ದರ್ಸ್ ವಿದ್ಯಾರ್ಥಿಗಳ ಕನ್ಸೋಲಿಯಂ ವಿದ್ಯಾರ್ಥಿ ಫೆಸ್ಟ್ ಸಮಾರೋಪ ಮತ್ತು ಈದ್ ಮೀಲಾದ್ ಸಮಾವೇಶ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸ ವಠಾರದಲ್ಲಿ ಚಾಲನೆ ನೀಡಲಾಯಿತು. ಮಸ್ಜಿದ್ ಆಡಳಿತ ಸಮಿತಿ ಅಧ್ಯಕ್ಷ ಕೆ. ಎಂ. ಮುಸ್ತಫ ಧ್ವಜಾರೋಹಣ ಮಾಡಿ ಚಾಲನೆ ನೀಡಿದರು
ಖತೀಬರಾದ ಅಲ್ ಹಾಜ್ ಅಶ್ರಫ್ ಖಾಮಿಲ್ ಸಖಾಫಿ ದುವಾ ಪ್ರಾರ್ಥನೆ ಮಾಡಿದರು. ಮುದರ್ರಿಸ್ ಇರ್ಫಾನ್ ಸಖಾಫಿ
ಪ್ರವಾದಿ ಜೀವನ ಚರಿತ್ರೆ ಉಪನ್ಯಾಸ ನೀಡಿದರು, ವೇದಿಕೆಯಲ್ಲಿ ಜಮಾಅತ್ ಉಪಾಧ್ಯಕ್ಷ ಹಾಜಿ ಮಹಮ್ಮದ್ ಕೆಎಂಎಸ್, ಪ್ರಧಾನ ಕಾರ್ಯದರ್ಶಿ ಹಾಜಿ ಐ. ಇಸ್ಮಾಯಿಲ್,ಖಜಾಂಚಿ ಹಾಜಿ ಮೊಯಿದಿನ್ ಫ್ಯಾನ್ಸಿ, ನಿರ್ದೇಶಕರುಗಳಾದ ಕೆ. ಎಸ್.ಉಮ್ಮರ್, ಇಬ್ರಾಹಿಂ ಶಿಲ್ಪಾ, ಹಾಜಿ ಎಸ್. ಎಂ. ಅಬ್ದುಲ್ ಹಮೀದ್,ಮದರಸ ಉಸ್ತುವಾರಿಗಳಾದ ಕೆ. ಬಿ. ಅಬ್ದುಲ್ ಮಜೀದ್, ಹಮೀದ್ ಬೀಜಕೊಚ್ಚಿ,ಅನ್ಸಾರುಲ್ ಮುಸ್ಲಿಮೀನ್ ಅಧ್ಯಕ್ಷ ಹಾಜಿ ಅಬ್ದುಲ್ ಶುಕೂರ್, ಪ್ರಧಾನ ಕಾರ್ಯದರ್ಶಿ ಅನ್ಸಾರಿಯ ಎಜುಕೇಶನ್ ಸೆಂಟರ್ ಪ್ರದಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಹರ್ಲಡ್ಕ,ಬಿ. ಎಂ. ಹನೀಫ, ಸಂಶುದ್ದೀನ್ ಕೆ. ಬಿ,ಖಜಾಂಚಿ ಎಸ್. ಪಿ.ಅಬೂಬಕ್ಕರ್, ನಿರ್ದೇಶಕರುಗಳಾದ ಹಾಜಿ ಅಬ್ದುಲ್ ಖಾದರ್ ಎಂ. ಟಿ.ಹಾಜಿ ಅಬ್ದುಲ್ ಖಾದರ್ ಪಾರೆ, ಶಾಫಿ ಕುತ್ತಾಮೊಟ್ಟೆ, ಕೆ. ಬಿ. ಇಬ್ರಾಹಿಂ,ಮೊದಲಾವರು ಉಪಸ್ಥಿತರಿದ್ದರು ಮುಅಝ್ನ್ ರವೂಫ್ ಝುಹರಿ ಕುರ್ ಆನ್ ಪಠಿಸಿದರು
ಮದರಸ ಮುಖ್ಯ ಗುರುಗಳಾದ ಇಬ್ರಾಹಿಂ ಸಖಾಫಿ ಪುoಡೂರ್ ಸ್ವಾಗತಿಸಿ, ಸಹಾಯಕ ಸದರ್ ಉಸ್ತಾದ್ ಅಬ್ದುಲ್ಖಾದರ್ ಎಡಪ್ಪಾಲಂ ವಂದಿಸಿದರು. ಮದರಸ ಮುಅಲ್ಲಿo ಗಳಾದ ಲತೀಫ್ ಸಖಾಫಿ ಗೂನಡ್ಕ, ನಿಸಾರ್ ಸಖಾಫಿ ಮುಡೂರ್ ಕಾರ್ಯಕ್ರಮ ನಿರೂಪಿಸಿದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ