ಕೇರಳ: ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು, ತ್ವಚೆ ಬೇಗನೆ ಬೆಳ್ಳಗಾಗಿಸಲು , ಬೆಳ್ತಿಟ್ ಪಾರ್ (ಬೆಳ್ಳಗೆ ಯಾಗಿ ಹಾರು), 7 ಡೇಸ್ ಚಾಲೆಂಜ್, ಎಂಬಂತೆ ಹಲವು ಜಾಹೀರಾತು ನೀಡಿ ಇಂತಹ ಡೆಡ್ಲಿ ಕ್ರೀಮ್ ಗಳನ್ನು ಮಾರಾಟ ಮಾಡುತ್ತಿದ್ದಾರೆ. ಇಂತಹ ಕ್ರೀಮ್‌ಗಳನ್ನು ಹಚ್ಚಿ ಜೀವಕ್ಕೆ ಅಪಾಯ ತಂದುಕೊಟ್ಟವರು ಅನೇಕರಿದ್ದಾರೆ. ಇಂತಹ ಯಾವುದೇ ಹೆಸರಿಲ್ಲದೆ, ಸರಾಕಾರದ ನೀತಿ ನಿಯಮ ಪಾಲಿಸದ ಕ್ರೀಮ್ ಗಳನ್ನು ಉಪಯೋಗಿಸಿ ಮೂತ್ರಪಿಂಡದ ಕಾಯಿಲೆಗೆ ತುತ್ತಾಗಿದ್ದಾರೆ ಅನೇಕರು. ಕೊಟ್ಟೈಕ್ಕಲ್‌ನ ಆಸ್ಟರ್ ಮಿಮ್ಸ್ ಆಸ್ಪತ್ರೆಯ ನೆಫ್ರಾಲಜಿ ವಿಭಾಗದ ವೈದ್ಯರು ಇಂತಹ ಬೆಚ್ಚಿ ಬೀಳಿಸುವಂತಹ ಸತ್ಯಾಂಶವೊಂದನ್ನು ತಿಳಿಸಿದ್ದಾರೆ. ಕಳೆದ ಫೆಬ್ರವರಿಯಿಂದ ಜೂನ್ ವರೆಗೆ ಚಿಕಿತ್ಸೆ ಪಡೆದ ರೋಗಿಗಳಲ್ಲಿ ಮೆಂಬ್ರಾನಸ್ ನೆಫ್ರೋಪತಿ (ಎಂಎನ್) ಎಂಬ ಅಪರೂಪದ ಮೂತ್ರಪಿಂಡ ಕಾಯಿಲೆ ಕಂಡುಬಂದಿದೆ. ಇದು ಮೂತ್ರಪಿಂಡದ ಫಿಲ್ಟರ್ ಹಾನಿಗೊಳಗಾಗುವ ಸ್ಥಿತಿಯಾಗಿದೆ ಮತ್ತು ಮೂತ್ರದಲ್ಲಿ ಪ್ರೋಟೀನ್ ಕಳೆದುಹೋಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ರೋಗವನ್ನು ಪತ್ತೆಹಚ್ಚಿದವರಲ್ಲಿ, ಬಾಗಶಃ ಚರ್ಮವನ್ನು ಬಿಳಿಗೊಳಿಸಲು ಕ್ರೀಮ್‌ಗಳನ್ನು ಬಳಸುವವರಾಗಿದ್ದಾರೆ ಎಂದು ತಿಳಿಸಿದ್ದಾರೆ. ಹದಿನಾಲ್ಕು ವಯಸ್ಸಿನ ಒಬ್ಬನಲ್ಲಿ ಈ ರೋಗವನ್ನು ಮೊದಲು ಗಮನಿಸಲಾಗಿದ್ದು, ಯಾವುದೇ ಔಷಧಗಳು ಆತನ ರೋಗಕ್ಕೆ ಮದ್ದಾಗಿ ಕೆಲಸ ಮಾಡದಿದ್ದಾಗ, ಆ ಮಗುವು ಇತ್ತೀಚೆಗೆ ತಾನು ಬಳಸಿದ ಅಥವಾ ಸೇವಿಸಿದ ಅಸಾಮಾನ್ಯ ವಸ್ತುಗಳನ್ನು ವೈದ್ಯರು ಕೇಳಿದಾಗ, ಬಾಲಕ ತನ್ನ ಮುಖದ ಕಾಂತಿ ಹೆಚ್ಚಿಸಲು ಫೇರ್‌ನೆಸ್ ಕ್ರೀಮ್ ಬಳಸಿರುವುದುದಾಗಿ ತಿಳಿಸಿದ್ದಾನೆ. ಆದರೆ ಇದುವೇ ಕಾಯಿಲೆಗೆ ನೇರಕಾರಣ ಎಂದು ಖಚಿತವಾಗಿ ಹೇಳಲು ವೈದ್ಯರಿಗೆ ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ಮಾರಕ ಖಾಯಿಲೆಗೆ ಒಳಗಾದ ಮಗುವಿನ ಸಂಬಂಧಿಯೊಬ್ಬರು ಕೂಡಾ ಅದೇ ರೋಗದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಅಂಶ ಕೂಡ ವೈದ್ಯರು ಕಂಡುಕೊಂಡಿದ್ದಾರೆ. ಈತನು ಕೂಡಾ ವೈಟನಿಂಗ್ ಫೇಸ್ ಕ್ರೀಮ್ ಬಳಸಿರುವುದಾಗಿ ತಿಳಿಸಿದ್ದಾನೆ. ಹಾಗೇ ಇಪ್ಪತ್ತೊಂಬತ್ತು ವರ್ಷದ ಇನ್ನೊಬ್ಬ ಯುವಕನಲ್ಲಿ ಕೂಡಾ ಅದೇ ರೋಗಲಕ್ಷಣಗಳೊಂದಿಗೆ ವೈದ್ಯರನ್ನು ಸಂಪರ್ಕಿಸಿದ್ದು, ಈತ ಕೇವಲ ಎರಡು ತಿಂಗಳಿಂದ ಫೇರ್ ನೆಸ್ ಕ್ರೀಮ್ ಬಳಸುತ್ತಿದ್ದ ಎಂದು ಬಹಿರಂಗವಾಗಿದೆ. ವೈದ್ಯರು ಇದರ ಜಾಡನ್ನು ಹಿಡಿಯಲು, ಈ ಹಿಂದೆ ಇದೇ ರೋಗಲಕ್ಷಣಗಳೊಂದಿಗೆ ಚಿಕಿತ್ಸೆ ಪಡೆದ ಎಲ್ಲಾ ರೋಗಿಗಳನ್ನು ಕರೆಸಿ ವಿಚಾರಿಸಿದಾಗ, ಅವರೆಲ್ಲ ವೈಟನಿಂಗ್ ಕ್ರೀಮ್ ಬಳಸುವವರಾಗಿದ್ದಾರೆ ಎಂದು ತಿಳಿದು ಬಂದಿದೆ. ಇದರೊಂದಿಗೆ ರೋಗಿಗಳು, ಅವರು ಬಳಸಿದ ಮುಖದ ಕ್ರೀಂ ಅನ್ನು ವಿವರವಾದ ಪರೀಕ್ಷೆಗಾಗಿ ಚೆನ್ನೈ ಗೆ ಕಳುಹಿಸಿ ಪರೀಕ್ಷೆ ನಡೆಸಿದಾಗ ವೈದ್ಯರಿಗೆ ಬೆಚ್ಚಿ ಬೀಳುವಂತಹ ಸ್ಪೋಟಕ ಮಾಹಿತಿ ಗೊತ್ತಾಗಿದೆ. ಈ ಎಲ್ಲಾ ಕ್ರೀಮ್ ಗಳಲ್ಲಿ ಪಾದರಸ ಮತ್ತು ಸೀಸದ ಮಟ್ಟಗಳು ಅನುಮತಿಸುವ ಮಿತಿಗಳಿಗಿಂತ ನೂರಾರು ಪಟ್ಟು ಹೆಚ್ಚು ಇದರಲ್ಲಿ ಉಪಯೋಗಿಸಲಾಗಿದೆ ಇದರಿಂದ ಈ ರೊಗಕ್ಕೆ ತುತ್ತಾಗಿದ್ದಾರೆ ಎಂದು ಡಾ. ಸಜೀಶ್ ಶಿವದಾಸನ್ ಮತ್ತು ಡಾ. ರಂಜಿತ್ ನಾರಾಯಣನ್ ಹೇಳಿದ್ದಾರೆ.
ಕ್ರಿಮ್ ಉಪಯೋಗಿಸುವವರು ಮುಂದೆ ದೊಡ್ಡದಾದ ಅನಾಹುತ ಎದುರಿಸಲಿದ್ದಾರೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅನೇಕ ಯುವಕರು ಯುವತಿಯರು ಬೇರೆ ಬೇರೆ ಕಾಯಿಲೆಗೆ ತುತ್ತಾಗಿದ್ದಾರೆ, ಕೇವಲ ಮುಖದ ಕಾಂತಿಗಾಗಿ ಜೀವನ ಹಾಳು ಮಾಡುವುದೆ ಎಷ್ಟು ಸರಿ ಎಂದು ವೈದ್ತಿಳಿಸಿದ್ದಾರೆ. ಇನ್ನೂ ವೈಟನಿಂಗ್ ಕ್ರೀಮ್‌ಗಳಲ್ಲಿ ತಯಾರಕರು ಅಥವಾ ಅವರು ಉಪಯೋಗಿಸುವ ಪದಾರ್ಥಗಳ ಬಗ್ಗೆ ಮಾಹಿತಿಯನ್ನು ನೀಡಿಲ್ಲ. ಯಾವ ರಾಸಾಯನಿಕ ಪದಾರ್ಥಗಳು ಎಷ್ಟು ಪ್ರಮಾಣದಲ್ಲಿ ನೀಡಲಾಗಿದೆ ಎಂಬುದನ್ನು ತಿಳಿಸಿಲ್ಲ. ಕೇವಲ ಹಣದ ಆಸೆಗಾಗಿ ಕ್ರೀಮ್ ಗಳು ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಬಲಿಯಾಗುವುದು ಅಮಾಯಕರು, ಆದಷ್ಟು ಬೇಗ ಇದಕ್ಕೆ ಕಡಿವಾಣ ಹಾಕಬೇಕು, ಕೇರಳ ಮಾತ್ರ ವಲ್ಲ ನಮ್ಮ ರಾಜ್ಯದಲ್ಲೂ ಈ ಕ್ರಿಮ್ ಗಳು ಸದ್ದಿಲ್ಲದೆ ಉಪಯೋಗಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಕಾನೂನು ಕ್ರಮ ಜರಗಿಸಬೇಕಾಗಿದೆ.
Advertisement
Advertisement