Advertisement

ಸುಳ್ಯದ ಬತ್ತದ ಜೀವನೋತ್ಸಾಹದ ಚಿಲುಮೆ, ಅರೆಭಾಷೆ ಲೇಖಕಿ ಕಾವೇರಮ್ಮ ಎಂ.ಜಿಯವರಿಗೆ ಸುಳ್ಯದ ಅಚಲ ಪ್ರಕಾಶನದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಕಾವೇರಮ್ಮ ಎಂ.ಜಿ ಯವರು ತನ್ನ ಇಳಿವಯಸ್ಸಿನಲ್ಲಿಯೂ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ವಾಟ್ಸಾಪ್, ಫೇಸ್ಬುಕ್ ಗಳಲ್ಲಿ ಲೀಲಾಜಾಲವಾಗಿ ವ್ಯವಹರಿಸಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರ ವಿವಿಧ ಕ್ಷೇತ್ರಗಳ ಸಾಧನೆಗಳನ್ನು ಗಮನಿಸಿ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಯಿತು.
ಅಚಲ ಪ್ರಕಾಶನದ ಅಧ್ಯಕ್ಷ ಚಂದ್ರಶೇಖರ ಬಿಳಿನೆಲೆ ಮತ್ತು ಸಂಚಾಲಕಿ ಡಾ.ಅನುರಾಧಾ ಕುರುಂಜಿ ಅವರನ್ನು ಸನ್ಮಾನಿಸಿದರು. ಅಂಶಲ್ ಬಿಳಿನೆಲೆ ಮತ್ತು ಅಂಕಣಗಾರ್ತಿ ಚಂದ್ರಾವತಿ ಬಡ್ಡಡ್ಕ ಉಪಸ್ಥಿತರಿದ್ದರು.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ