ಬೆಳ್ತಂಗಡಿ ತಾಲೂಕಿನ ವೇಣೂರ್ ಬಂದಾರು ಮಹಮ್ಮದ್ ರವರು ಕಳೆದ 35 ವರ್ಷಗಳಿಂದ ನೀರಿನಲ್ಲಿ ವಿಪತ್ತು ಸಂಭವಿಸಿದಾಗ ಮುಳುಗು ತಜ್ಞರಾಗಿ, ಅಪಘಾತ ಸೇವೆ ಇನ್ನಿತರ ತುರ್ತು ಸಂದರ್ಭದಲ್ಲಿ ರಾತ್ರಿ ಹಗಲೆನ್ನದೆ ಧಾವಿಸುವವ ರು, ಈಗಲೂ ತನ್ನ 63 ವರ್ಷ ಪ್ರಾಯದಲ್ಲೂ ನೀರಿಗೆ ಧುಮುಕುವ ಸಾಹಸಿ, ಹಲವು ಜಿಲ್ಲಾ, ರಾಜ್ಯ ಪ್ರಶಸ್ತಿ ಪಡೆದಿರುವ ಬಂದಾರು ಮಹಮ್ಮದಾಕ ರಿಗೆ ಇಂದು ಮಗನ ಮದುವೆ ಸಂಭ್ರಮ ಗುರುವಾಯನಕೆರೆ ಶಾದಿಮಹಲ್ ನಲ್ಲಿ ಬಂದಾರು ಮಹಮ್ಮದ್ ರವರ ಪುತ್ರ ಅಬ್ದುಲ್ ಸಮದ್ ಎಂಬವರ ಮದುವೆ ಸಮಾರಂಭ, ಈ ಸಮಾರಂಭ ದಲ್ಲಿ ವಧು ಮತ್ತು ವರನ ಬಂಧು, ಮಿತ್ರಾದಿಗಳು, ಹಿತೈಷಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜಕ್ಕೆ ಮಾದರಿ ಕಾರ್ಯ ಮಾಡಿ ಸಮುದಾಯಕ್ಕೆ ಕೀರ್ತಿ ತಂದ,ವರನ ತಂದೆ ಕುಟುಂಬದ ಯಜಮಾನ ಮಹಮ್ಮದ್ ಬಂದಾರು ರವರನ್ನು ಈ ಶುಭ ಕಾರ್ಯದಲ್ಲಿ ಸನ್ಮಾನ ಮಾಡಲಾಯಿತು
ಸನ್ಮಾನ ನೆರವೇರಿಸಿ ಮಾತನಾಡಿದ ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಕೆ. ಎಂ ಮುಸ್ತಫ ಸುಳ್ಯ ಮಾತನಾಡಿ ಬಂದಾರು ಮಹಮ್ಮದ್ ರವರು ಯಾವುದೇ ತುರ್ತು ಸಂದರ್ಭದಲ್ಲಿ ನೆರವಿಗೆ ಧಾವಿಸುವ ಸೇವೆ ಯುವಕರಿಗೆ ಆದರ್ಶ, ಜಾತಿ ಮತ ಭೇದವಿಲ್ಲದೆ ಮಾಡುವ ಇವರ ಮಾನವೀಯತೆಯ ಕೆಲಸ ಪ್ರವಾದಿ ಯವರ ಸಂದೇಶದ ಭಾಗ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಮ್ಮದ್ ರು ನೀರಕಟ್ಟೆ ಡ್ಯಾಮ್ ನಿಂದ ಮುನ್ಸೂಚನೆ ಇಲ್ಲದೆ ನೀರು ಬಿಟ್ಟ ಸಂದರ್ಭದಲ್ಲಿ ಹಾಯ್ ದೋಣಿಯಲ್ಲಿ ಬರುತ್ತಿದ್ದ ತಿಮ್ಮೆಗೌಡ ಎಂಬವರನ್ನು ಅಪಾಯ ಲೆಕ್ಕಿಸದೆ ನೀರಿಗೆ ಎತ್ತರದಿಂದ ಧಮುಕಿ ಪ್ರಾಣ ರಕ್ಷಿಸಿದ ಘಟನೆ ಇಂದಿಗೂ ನನ್ನನ್ನು ರೋಮಾಂಚನ ಗೊಳಿಸುತ್ತದೆ, ಎಂದರು
ಬ್ಯಾರಿ ಸಾಹಿತ್ಯ ಅಕಾಡೆಮಿಯ ರಾಜ್ಯ ಪ್ರಶಸ್ತಿ, ಕೇರಳದ ನಾಲೆಜ್ ಸಿಟಿ ಯಲ್ಲಿ ಜೀವ ರಕ್ಷಕ ಪ್ರಶಸ್ತಿ, ಸಹಿತ ಅನೇಕ ಸಂಘ ಸಂಸ್ಥೆಗಳು ಮಹಮ್ಮದ್ ರ ಸೇವೆಯನ್ನು ಗುರುತಿಸಿ ಗೌರವಿಸಿದೆ. ಈ ಸಂದರ್ಭದಲ್ಲಿ ಕುಟುಂಬದ ಮುಖ್ಯಸ್ಥರುಗಳಾದ ಅಮ್ರಾಜ್ ಕಂಕನಾಡಿ, ಅಮೀರ್ ಅಹಸನ್ ಬಿಜೈ, ಹಾರಿಸ್ ನೆಟ್ಟಣ, ಮುಸ್ತಫ ಬುಡೋಲಿ, ಸಿದ್ದೀಕ್ ಮೆಟ್ರೋ ಸುಳ್ಯ, ಶಹೀರ್ ಕಲ್ಲಾಜೆ, ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ