2020ರಲ್ಲಿ ಮದುವೆ, ಪತ್ನಿಗೆ ಓದುವ ಆಸೆ, ನಾನ್ಯಾಕೆ ಅದಕ್ಕೆ ಅಡ್ಡಿ ಬರಲಿ, ಆಕೆಯೂ ಓದಿ ಕೆಲಸ ಮಾಡಿ ಹೆಸರುಗಳಿಸಲಿ ಎನ್ನುವ ನಿಸ್ವಾರ್ಥ ಪ್ರೀತಿ ಪತಿಯದ್ದು. ಹಾಗಾಗಿ ಸಾಲ ಮಾಡಿ ಪತ್ನಿಗೆ ನರ್ಸಿಂಗ್ ವಿದ್ಯಾಭ್ಯಾಸ ಮಾಡಿಸಿದ್ದ. ಇದೀಗ ಪತ್ನಿ ಪ್ರಿಯಕರನೊಂದಿಗೆ ಓಡಿ ಹೋಗಿ ಮದುವೆಯಾಗಿದ್ದಾಳೆ. ಈ ಘಟನೆ ಜಾರ್ಖಂಡ್ನಲ್ಲಿ ನಡೆದಿದೆ. ಉತ್ತರ ಪ್ರದೇಶದ ಜ್ಯೋತಿ ಮೌರ್ಯ ಅವರ ಪ್ರಕರಣಕ್ಕೆ ಸ್ವಲ್ಪ ಹೋಲುತ್ತದೆ. ಒಂದೇ ಒಂದು ವ್ಯತ್ಯಾಸವೆಂದರೆ ಈ ಪ್ರಕರಣದಲ್ಲಿ ಮಹಿಳೆಗೆ ಕೆಲಸ ಸಿಕ್ಕಿಲ್ಲ. ಈ ಘಟನೆ ಕುರಿತು ಪತಿ ಟಿಂಕು ಕುಮಾರ್ ಯಾದವ್ ಮಾತನಾಡಿ, ಸೆ.19ರಂದು ಪತ್ನಿಗೆ ಮನೆಗೆ ಹೋಗುವ ನೆಪದಲ್ಲಿ ಕಾಲೇಜು ಬಿಟ್ಟಿದ್ದರೂ ಮನೆಗೆ ಬಂದಿರಲಿಲ್ಲ. ನಂತರ ತಾನು ಗೊಡ್ಡಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ತನಿಖೆ ನಡೆಸಿದಾಗ ವಿವಾಹಿತ ಮಹಿಳೆ ಬುಧೋನಾ ಗೊಡ್ಡಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಯುವಕ ದಿಲ್ಖುಷ್ ರಾವತ್ ಜತೆ ಓಡಿ ಹೋಗಿದ್ದಾರೆ ಎನ್ನುವುದು ತಿಳಿದುಬಂದಿದೆ.
ದೆಹಲಿಗೆ ಹೋಗಿ ಯಾವುದೋ ದೇವಸ್ಥಾನದಲ್ಲಿ ಮದುವೆಯಾಗಿದ್ದೇನೆ ಎಂದು ಫೋಟೊಗಳನ್ನು ಕಳುಹಿಸಿದ್ದಾಳೆ ಎಂದು ಟಿಂಕು ಹೇಳಿದ್ದಾರೆ.
ಕೂಲಿ ಮಾಡಿ ಸಾಲ ಮಾಡಿ ನರ್ಸಿಂಗ್ ಕಾಲೇಜಿಗೆ ಕಳುಹಿಸಿ ಓದಿಸಿದರೂ ಆಕೆ ತನಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ ಎಂದು ಭಾರವಾದ ಮನಸ್ಸಿನಿಂದ ನೋವು ಹಂಚಿಕೊಂಡಿದ್ದಾರೆ.
ಸಾಲ ಮಾಡಿ ನರ್ಸಿಂಗ್ ಪ್ರವೇಶ ಪಡೆದಿದ್ದಳು: ನವೆಂಬರ್ 2020ರಲ್ಲಿ ಟಿಂಕು ಕುಮಾರ್ ಯಾದವ್ ಅವರು ಪ್ರಿಯಾ ಕುಮಾರಿ ಅವರನ್ನು ಸಾಂಪ್ರದಾಯಿಕವಾಗಿ ವಿವಾಹವಾದರು. ಟಿಂಕು ಕೂಲಿ ಕೆಲಸ ಮಾಡುತ್ತಿದ್ದು, ಪತ್ನಿಯ ಆಸೆಯಂತೆ ಆಕೆಯನ್ನು ಶಕುಂತಲಾ ನರ್ಸಿಂಗ್ ಕಾಲೇಜಿಗೆ ಸೇರಿಸಿದ್ದ. ಇದರಲ್ಲಿ ಪತಿ ಒಟ್ಟು 2.5 ಲಕ್ಷ ಸಾಲ ಪಡೆದು ಹಾಸ್ಟೆಲ್ ಶುಲ್ಕದ ಜತೆ ವಸತಿ, ಊಟದ ವ್ಯವಸ್ಥೆ ಮಾಡಿದ್ದಾನೆ. ಅವರ ಗೊಡ್ಡಾದಲ್ಲಿ ಅಂತಿಮ ವರ್ಷದ ನರ್ಸಿಂಗ್ ಓದುತ್ತಿದ್ದರು. ಅಂತಿಮ ಪರೀಕ್ಷೆಯು ಕೆಲವೇ ದಿನಗಳಲ್ಲಿ ನಡೆಯಲಿದೆ.
ಕಾಸರಗೋಡು ಮೂಲದ ಹಾಶಿಂ ಸೆರೆ ಕಳೆದ ಒಂದು ತಿಂಗಳ ಹಿಂದೆ ಸುಳ್ಯ ಜಟ್ಟಿಪಳ್ಳದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಮೋಹನದಾಸ ಮುದ್ಯರವರ…
ಲಂಡನ್: ಕಳೆದ ತಿಂಗಳು ಯುಕೆಯಲ್ಲಿ ನಾಪತ್ತೆಯಾಗಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿ ಲಂಡನ್‌ನ (London) ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.…
ಸುಳ್ಯ: ಡಿ೧, ಮಡಿಕೇರಿಯ ಎರಡನೇ ಮಣ್ಣಗೇರಿಯ ನಿವಾಸಿ ವೆಂಕಟರಮಣ ಎಂಬುವವರು ಅರಂಬೂರು ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದ್ದು, ಮೃತ…
ತಿರುವನಂತಪುರಂ: ಚಕ್ಕುಲಿ (Murukku) ಗಂಟಲಲ್ಲಿ ಸಿಲುಕಿಕೊಂಡು ಒಂದೂವರೆ ವರ್ಷದ ಪುಟ್ಟ ಕಂದಮ್ಮ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಕೇರಳದಲ್ಲಿ (Kerala) ನಡೆದಿದೆ. ಮೃತ…
ತಿರುವನಂತಪುರ: ಮಲಯಾಳಂನ ಖ್ಯಾತ ನಟಿ ಆರ್. ಸುಬ್ಬಲಕ್ಷ್ಮಿ (87) ಅವರು ನಿಧನರಾಗಿದ್ದಾರೆ. ಗುರುವಾರ ರಾತ್ರಿ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ…
ಬರೋಬ್ಬರಿ ₹3.16 ಕೋಟಿ ಬಿಲ್ ಬಾಕಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟಿ20 ಪಂದ್ಯ ರಾಯ್‌ಪುರದ ಶಹೀದ್…