ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ಗಣಿಗಾರಿಕೆ ನಡೆಯುತ್ತಿದ್ದು ಇದನ್ನು ತಕ್ಷಣ ನಿಲ್ಲಿಸಬೇಕೆಂದು ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ದಿನಾಂಕ ಜೂನ್28 ರಂದು ಮಾನ್ಯ ಜಿಲ್ಲಾಧಿಕಾರಿಯವರಿಗೆ ಹಾಗೂ ಸುಳ್ಯ ತಹಶೀಲ್ದಾರ್ ಅವರಿಗೆ ಮತ್ತು ಸಂಬಂಧಪಟ್ಟ ಇಲಾಖೆಯವರಿಗೆ ಮನವಿ ಪತ್ರ ಕೊಟ್ಟು ಮನವಿ ಮಾಡಲಾಯಿತು. ಕೆಲವು ದಿನಗಳು ಕಳೆದರು ಯಾವುದೇ ಒಂದು ಕ್ರಮ ಕೈಗೊಂಡಿಲ್ಲ, ಹಾಗೂ ಈ ದಿನ ಸುಳ್ಯ ತಾಲೂಕಿನ ಹಲವೆಡೆ ಭೂಕಂಪದ ಅನುಭವ ಎರಡು ಬಾರಿ ಆಗಿದೆ ಇದಕೆಲ್ಲ ಕಾರಣ ಈ ಗಣಿಗಾರಿಕೆ ಈ ಗಣಿಗಾರಿಕೆಗೆ ಬಳಸುವ ಸ್ಪೋಟದಿಂದ ಭೂಮಿ ಕಂಪಿಸುತ್ತದೆ ಆದರಿಂದ ಈ ಭೂಕಂಪದ ಅನುಭವ ಆಗಿದೆ ಅಧಿಕಾರಿಯವರು ಗಣಿಗಾರಿಕೆಗೆ ಅನುಮತಿ ಕೊಟ್ಟು ಈಗ ಕೈ ಕಟ್ಟಿ ಕುಳಿತುಕೊಂಡಿದ್ದಾರೆ ಇವತ್ತು ಮರ್ಕಂಜದ ಸ್ಥಳೀಯರ ಕಷ್ಟಗಳು ನಿಮಗೆ ಹೇಗೆ ತಿಳಿಯಬೇಕು ಆದ ಕಾರಣ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಆ ಗಣಿಗಾರಿಕೆಯನ್ನು ನಿಲ್ಲಿಸಬೇಕು, ಒಂದು ವೇಳೆ ನಿಲ್ಲಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಸುಳ್ಯ ತಾಲೂಕು ಕಚೇರಿಯ ಮುಂಭಾಗದಲ್ಲಿ ದಿನಾಂಕ ಜುಲೈ 4-2022ನೇ ಸೋಮವಾರ ಬೆಳಗ್ಗೆ 10.30 ಕ್ಕೆ ಧರಣಿ ಮಾಡಲಿದ್ದೇವೆ ಜಿಲ್ಲಾಧ್ಯಕ್ಷರು ಪಿ.ಸುಂದರ ಪಾಟಾಜೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ