Advertisement
ಸುಳ್ಯ: ಖ್ಯಾತ ಚಲನಚಿತ್ರ ಹಾಸ್ಯ ನಟ, ಕಾಮೆಡಿ ಕಿಂಗ್ ಅರವಿಂದ್ ಬೋಳಾರ್ ಅವರು ಬೆಂಗಳೂರಿಗೆ ತೆರಳುತ್ತಿರುವ ಸಂಧರ್ಭ, ಸುಳ್ಯ ಗಾಂಧಿನಗರದ ಮೆಟ್ರೋ ಹೋಟೆಲ್‌ನಲ್ಲಿ ಮಧ್ಯಾಹ್ನದ ಊಟಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಹಲವು ಮಂದಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಜೊತೆ ಪೊಟೋ, ಸೆಲ್ಪಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿ ಸಂಭ್ರಮಿಸಿದರು.

ದಾಯ್ದಿವಲ್ಡ್ ಚಾನೆಲ್‌ನಲ್ಲಿ ಪ್ರಸಾರವಾಗುವ ಪ್ರೈವೇಟ್ ಚಾಲೆಂಜ್ ಕಾರ್ಯಕ್ರಮದ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ತೆರಳುದರು. ಈ ಸಂದರ್ಭದಲ್ಲಿ ಸುಳ್ಯ ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಶಿಯಾನ್ ದರ್ಬೆ, ಮನ್ಸೂರ್ ಮೆಟ್ರೋ, ಮುನಾವರ್ ಮೆಟ್ರೋ ಮತ್ತಿತರರು ಉಪಸ್ಥಿತರಿದ್ದರು.
Advertisement