ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಯವರನ್ನು ಭೇಟಿ ಮಾಡಿದ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ ಪುತ್ತೂರು ಕಾಂಗ್ರೆಸ್ ಕಚೇರಿಯಲ್ಲಿ ಭೇಟಿ ಮಾಡಿ ಸುಳ್ಯದ ಸೂಡ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಅರ್ಪಿಸಿದರು


ದ. ಕ. ಜಿಲ್ಲೆ ಸುಳ್ಯ ಹಿಂದುಳಿದ ಗ್ರಾಮೀಣ ಪ್ರದೇಶ ವಾಗಿದ್ದು, ಶೈಕ್ಷಣಿಕ, ಮತ್ತು ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಪ್ರದೇಶ ವಾಗಿರುತ್ತದೆ
ಸುಳ್ಯ ನಗರ ಬೌಗೊಳಿ ಕವಾಗಿ ಒಂದು ಭಾಗದಲ್ಲಿ ನದಿ ಇನ್ನೊಂದು ಭಾಗದಲ್ಲಿ ಅರಣ್ಯ ಪ್ರದೇಶವಿರುತ್ತದೆ, ಗುಡ್ಡಗಾಡು ಗಳಿಂದ ಕೂಡಿದ 6 ಚದರ ಕಿ. ಮೀ. ವಿಸ್ತೀರ್ಣದ ಈ ಪ್ರದೇಶಗಳಲ್ಲಿ ಅಭಿವೃದ್ಧಿಗೆ ಕೆಲವು ಸೂಡ ನಿಯಮ ಗಳಿಂದ ತೊಡಕಾಗಿದೆ,
ಕೊಡಗು, ಮತ್ತು ಕೇರಳ ರಾಜ್ಯದ ಗಡಿ ಪ್ರದೇಶವಾದ ಸುಳ್ಯ ನಗರದಲ್ಲಿ ಮಹಾ ಯೋಜನೆ ಅನುಮೋದನೆಗೆ ಬಾಕಿ ಇರುತ್ತದೆ ಪರಿಷ್ಕೃತ ಮಹಾ ಯೋಜನೆ ಯನ್ನು ಸುಳ್ಯ ವನ್ನು ವಿಶೇಷ ಬೌಗೋಳಿಕ ಹಿನ್ನಲೆ ಯ ವಿಶೇಷ ಪ್ರಕರಣ ಎಂದು ಪರಿಗಣಿಸಿ ನಿಯಮಗಳ ಸರಳೀಕರಣದೊಂದಿಗೆ ಅನುಮೋದನೆ ನೀಡುವುದು
ಸುಳ್ಯ ದಲ್ಲಿ ನಗರ ಯೋಜನಾ ಪ್ರಾಧಿಕಾರದ ಕಾನೂನು ಜ್ಯಾರಿ ಯ ಪೂರ್ವದಲ್ಲಿ ಅಂದರೆ 2013 ಕ್ಕೆ ಮುಂಚಿತವಾಗಿ ಆದ ಕಟ್ ಕನ್ವರ್ಷನ್ ಆಗಿ ಕನ್ವರ್ಷನಗೆ ಸೂಡ ಅನುಮೋದನೆ ಯಿಂದ ವಿನಾಯಿತಿ ನೀಡುವುದು,2013 ಕ್ಕೆ ಮುಂಚಿತವಾಗಿ ನಿರ್ಮಾಣ ಗೊಂಡ ಕಟ್ಟಡಗಳ ಅಭಿವೃದ್ಧಿ, ವಿಸ್ತರಣೆ ಗೆ ನಗರ ಪಂಚಾಯತ್ ನಿಂದಲೇ ಅನುಮತಿ ನೀಡುವುದು
ಮೊದಲಾದ ಸಮಸ್ಯೆಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸರಕಾರದ ಮಟ್ಟದಲ್ಲಿ ಪ್ರಭಾವ ಬೀರಿ ಮಾನ್ಯ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರೊಂದಿಗೆ ಶಿಫಾರಸು ಮಾಡಿ ಅನುಪಾಲನೆ (follow up ) ಮಾಡಿ ಸುಳ್ಯದ ಜನತೆ ಹಲವು ವರ್ಷಗಳಿಂದ ಅನುಭವಿಸುತ್ತಿರುವ ತೊಂದರೆ ಯನ್ನು ನೀಗಿಸಿ ಕೊಡಬೇಕೆಂದು ಮನವಿಯಲ್ಲಿ ವಿನಂತಿಸಿರುತ್ತಾರೆ

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ