https://amzn.to/3thE5LZ

ಇಸ್ರೇಲ್‌-ಪ್ಯಾಲೆಸ್ತೀನ್‌ (Israel-Palestine) ನಡುವಿನ ಯುದ್ಧದಲ್ಲಿ 60 ಕ್ಕೂ ಹೆಚ್ಚು ಪ್ರಜೆಗಳು ಸಾವನ್ನಪ್ಪಿದ್ದಾರೆ. ಯಾವ ದೇಶದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಮತ್ತು ಕಾಣೆಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಯುದ್ಧದಲ್ಲಿ ಈವರೆಗೆ ಅಮೇರಿಕಾದ 9 ಮಂದಿ ಸಾವಿಗೀಡಾಗಿದ್ದಾರೆ. ಕೆನಡಾ – 1 (ಇಬ್ಬರು ನಾಪತ್ತೆ), ಗ್ರೇಟ್ ಬ್ರಿಟನ್ – 10 ಕ್ಕೂ ಹೆಚ್ಚು ಮಂದಿ ಸಾವು ಅಥವಾ ಕಾಣೆಯಾಗಿದ್ದಾರೆ. ಫ್ರಾನ್ಸ್ – 1 ಸಾವು (ಹಲವಾರು ನಾಪತ್ತೆ), ಥೈಲ್ಯಾಂಡ್ – 12 ಸಾವು (11 ನಾಪತ್ತೆ), ನೇಪಾಳ – 10 ಸಾವನ್ನಪ್ಪಿದ್ದಾರೆ. 

ಜರ್ಮನಿ – ದೃಢೀಕರಿಸದ/ಕಾಣೆಯಾದ ಸಾವಿನ ಸಂಖ್ಯೆ, ರಷ್ಯಾ – 1, ಕಾಂಬೋಡಿಯಾ – 1, ಚೀನಾ – ಸಾವು/ಹಾನಿಗಳ ಸಂಖ್ಯೆಯನ್ನು ದೃಢೀಕರಿಸಲಾಗಿಲ್ಲ. ಬ್ರೆಜಿಲ್ – 3 ಮಂದಿ ಗಾಯಗೊಂಡಿದ್ದಾರೆ. ಪರಾಗ್ವೆ – 2 ಸಾವು ಅಥವಾ ಕಾಣೆ, ಉಕ್ರೇನ್ – ಇಬ್ಬರು ಮೃತಪಟ್ಟಿದ್ದಾರೆ.

ಮೆಕ್ಸಿಕೋದ ಇಬ್ಬರು ಕೈದಿಗಳು, ಐರ್ಲೆಂಡ್‌ನ ಒಬ್ಬರು ಗಾಯಗೊಂಡಿದ್ದಾರೆ. ತಾಂಜಾನಿಯಾದ ಇಬ್ಬರು ಗಾಯಗೊಂಡಿದ್ದಾರೆ. ಅಕ್ಟೋಬರ್ 7 ರಂದು ಹಮಾಸ್ (Hamas) ಬಂಡುಕೋರರು ಇಸ್ರೇಲ್ ಮೇಲೆ ಹಠಾತ್‌ ದಾಳಿ ನಡೆಸಿದರು. ದೇಶದ ದಕ್ಷಿಣ ಮತ್ತು ಮಧ್ಯ ಭಾಗಗಳಿಗೆ ರಾಕೆಟ್‌ಗಳ ಸುರಿಮಳೆ ಸುರಿಸಿ 700 ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲಾಯಿತು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ