ನೆಹರು ಮೆಮೋರಿಯಲ್ ಕಾಲೇಜು ಸಮಾಜಕಾರ್ಯ ವಿಭಾಗದ ವತಿಯಿಂದ ಸಮಾಜ ಕಾರ್ಯ ಸಂಘದ ಸಂಘದ ಉದ್ಘಾಟನಾ ಹಾಗೂ ವೃತ್ತಿಪರ ಸಮಾಜ ಕಾರ್ಯದ ವ್ಯಾಪ್ತಿಯ ವಿಚಾರದಲ್ಲಿ ಅತಿಥಿ ಉಪನ್ಯಾಸ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ರುದ್ರ ಕುಮಾರ್ ಎಂ ಎಂ ಇವರು ವಹಿಸಿ ,ವಿದ್ಯಾರ್ಥಿಗಳು ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸುವ ತೊಡಗಿಸಿಕೊಳ್ಳುವುದರ ಜೊತೆಗೆ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಸಂಘದ ಕಾರ್ಯ ಚಟುವಟಿಕೆಗಳ ಉದ್ಘಾಟನೆಯನ್ನು ಶ್ರೀಮತಿ ಮಧುರ ಎಂ ಆರ್, ಕಾರ್ಯದರ್ಶಿ ಹಳೆ ವಿದ್ಯಾರ್ಥಿ ಸಂಘ ಎನ್ ಎಂ ಸಿ ನೆರವೇರಿಸಿದರು.ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಕೌಶಲ್ಯಗಳನ್ನು ಅಭಿವೃದ್ಧಿ ಆವರಣಗೊಳಿಸುವ ವೇದಿಕೆಯಾಗಬೇಕು ತಿಳಿಸಿದರು.

ಸಮಾಜ ಕಾರ್ಯದ ವ್ಯಾಪ್ತಿಯು ಎಲ್ಲಾ ಕ್ಷೇತ್ರದಲ್ಲೂ ಆವರಿಸಿಕೊಂಡಿದೆ, ಎಲ್ಲಾ ಕ್ಷೇತ್ರದಲ್ಲೂ ಸಮಾಜ ಕಾರ್ಯಕರ್ತನ ಅಗತ್ಯವಿದೆ. ಸಮಾಜದ ಬದಲಾವಣೆಯಲ್ಲಿ, ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ವಿದ್ಯಾರ್ಥಿಗಳು ತಮ್ಮ ನಾಯಕತ್ವವನ್ನು ಅಭಿವೃದ್ಧಿಪಡಿಸಲು ಈ ಕ್ಷೇತ್ರವು ಬಹಳ ಸಹಕಾರಿಯಾಗಿದೆ ಎಂದು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಪಿ ವಿ ಸುಬ್ರಮಣಿ Karnataka state health operation manager ಸ್ವಸ್ಥ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಕಂಪನಿ ಯವರು ವಿದ್ಯಾರ್ಥಿಗಳಿಗೆ ತಿಳಿಸಿದರು.
ವೇದಿಕೆಯಲ್ಲಿ ಡಾ ಮಮತಾ ಕೆ ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕಿ ,ವಿಭಾಗದ ಮುಖ್ಯಸ್ಥೆ ಕೃಪಾ ಎ ನ್ ಉಪಸ್ಥಿತರಿದ್ದರು. ಸಂಘದ ಸಂಯೋಜಕಿ ಶೋಭಾ ಎ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಮೇಘನಾ ಎಸ್ ಪ್ರಾರ್ಥಿಸಿ, ದಕ್ಷಯ್ ಡಿ ಎಸ್ ವಂದಿಸಿ, ಸುಶ್ಮಿತಾ ಎಂ ಎಸ್ ಹಾಗೂ ಜ್ಯೋತಿ ಬಿ ಎಚ್ ಕಾರ್ಯಕ್ರಮವನ್ನು ನಿರೂಪಿಸಿದರು.