Advertisement

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಮಧ್ಯೆ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಎರಡು ಕಡೆಯ ನೂರಾರು ಮಂದಿ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ನೂರಾರು ಕಟ್ಟಡಗಳು ಬಾಂಬ್‌ ಸ್ಫೋಟಕ್ಕೆ ಧರೆಗುರುಳುತ್ತಿವೆ. ಈ ಮಧ್ಯೆ ವಿಶ್ವದ ಅನೇಕ ದೇಶಗಳು ಪರಸ್ಪರ ಎರಡು ದೇಶಗಳಿಗೆ ಬೆಂಬಲ ಸೂಚಿಸಿವೆ, ಇಸ್ರೇಲ್ ಮತ್ತು ಹಮಾಸ್ ರೌದ್ರಾವತಾರದ ಮಧ್ಯೆಯೂ ಯುದ್ಧದ ಬಗ್ಗೆ ಅನೇಕರು ಅಸಹನೆ ವ್ಯಕ್ತಪಡಿಸಿ ಶಾಂತಿ ಕಾಪಾಡುವಂತೆಯೂ ಮನವಿ ಮಾಡುತ್ತಿದ್ದಾರೆ. ಯುದ್ಧದಿಂದ ಎರಡೂ ಕಡೆಯ ನಾಗರಿಕರು ಅನ್ಯಾಯವಾಗಿ ಸಾಯುತ್ತಿದ್ದಾರೆ. ಈ ಮಧ್ಯೆ ಮಾಜಿ ನೀಲಿ ಚಿತ್ರ ತಾರೆ ಮಿಯಾ ಖಲೀಫಾ ಅವರು ಪ್ಯಾಲೆಸ್ತೀನ್‌ಗೆ ನನ್ನ ಬೆಂಬಲ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಮಿಯಾ ಖಲೀಫಾ, ಯುದ್ಧದ ಭೀಕರತೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದು, ಪ್ಯಾಲೆಸ್ತೀನ್ನ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ಜನರ ಸ್ಥಿತಿ ತುಂಬಾ ಶೋಚನೀಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದೀಚೆಗೆ ಇಸ್ರೇಲ್ ನಿರಂತರವಾಗಿ ಫಾಲೆಸ್ತೀನ್ ವಿರುದ್ಧ ದಾಳಿ ನಡೆಸುತ್ತಿದೆ, ಇದೀಗ ಫೆಲೆಸ್ತೀನ್ ಪ್ರತಿರೋಧ ನೀಡಿದೆ. ಆದರೆ ಇದಕ್ಕೆ ಪ್ರತಿಯಾಗಿ ಇಸ್ರೇಲ್ ಮಾರಣ ಹೋಮ ನಡೆಸುತ್ತಿದೆ, ಅಲ್ಲದೇ, ಶೋಚನೀಯ ಪರಿಸ್ಥಿತಿ ಎದುರುಸುತ್ತಿರುವ ನಾಗರಿಕರ ಪೈಕಿ ಪ್ಯಾಲೆಸ್ತೀನ್‌ನಲ್ಲಿ ವಾಸಿಸುವ ಜನಸಂಖ್ಯೆಯ ಶೇಕಡಾ 42 ರಷ್ಟು 15 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿದ್ದಾರೆ ಎಂದು ಮಿಯಾ ಖಲೀಫಾ ಹೇಳಿದ್ದಾರೆ. ಪ್ಯಾಲೆಸ್ತೀನ್ ಇತಿಹಾಸವು ಲಕ್ಷಾಂತರ ವರ್ಷಗಳಷ್ಟು ಹಳೆಯದಾಗಿದೆ. ಆದರೂ ನಾವು ಅವರ ನರಮೇಧವನ್ನು ನೋಡುತ್ತಿದ್ದೇವೆ ಮತ್ತು ಅದರ ಬಗ್ಗೆ ಯಾರೂ ಏನನ್ನೂ ಹೇಳುತ್ತಿಲ್ಲ ಎಂದು ಮಿಯಾ ಖಲೀಫಾ ಬೇಸರ ಹೊರ ಹಾಕಿದ್ದಾರೆ. ಇಸ್ರೇಲ್ ದಾಳಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಿಯಾ ಖಲೀಫಾ, ಈಗ ನೋಡುತ್ತಿರುವ ನರಮೇಧಕ್ಕೆ ಕೆಲವೇ ವರ್ಷಗಳಲ್ಲಿ ಇತಿಹಾಸದ ರೂಪದಲ್ಲಿ ಕಾಲವೇ ಉತ್ತರ ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ.ಇತ್ತ ಮಿಯಾ ಖಲೀಫಾ ಪ್ಯಾಲೆಸ್ತೀನ್‌ ಪರ ನಿಂತಿರುವುದಕ್ಕೆ ಪ್ಲೇ ಬಾಯ್ ಬ್ರಾಂಡ್ ಮೀಯಾರನ್ನು ವಜಾಗೊಳಿಸಿದೆ. ಅದೇ ರೀತಿ, ಪ್ಯಾಲೆಸ್ತೀನ್ ಪರ ಧ್ವನಿಯೆತ್ತಿದ ಬೆನ್ನಲ್ಲೇ ಕೆನಡಾದ ರೇಡಿಯೊ ಹೋಸ್ಟ್ ಮತ್ತು ಪಾಡ್‌ಕಾಸ್ಟರ್ ಟಾಡ್ ಶಪಿರೊ ಅವರೊಂದಿಗಿನ ಪಾಡ್‌ಕ್ಯಾಸ್ಟ್ ಒಪ್ಪಂದದಿಂದ ಮಿಯಾ ಖಲೀಫಾ ಅವರನ್ನು ವಜಾಗೊಳಿಸಲಾಗಿದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ