ಸೌತ್ ಬ್ಯೂಟಿ ಸಮಂತಾ (Samantha) ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಆರೋಗ್ಯದ ಹಿತದೃಷ್ಟಿಯಿಂದ ನಟಿ ಸಿನಿಮಾದಿಂದ ದೂರವಿದ್ದಾರೆ. ‘ಖುಷಿ’ (Kushi) ಚಿತ್ರದ ರಿಲೀಸ್ ವೇಳೆ ಫಾರಿನ್‌ನಲ್ಲಿ ಸ್ಯಾಮ್ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಮತ್ತೆ ನಟಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಫೋಟೋ ಕೂಡ ವೈರಲ್ ಆಗಿದೆ. ಸಮಂತಾ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಡ್ರಿಪ್ಸ್ ಹಾಕಲಾಗಿದೆ.

ಈ ಕುರಿತ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ. ಮಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ನಟಿ ಹಲವು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಅವರ ವೃತ್ತಿ ಬದುಕಿಗೂ ಕೊಂಚ ಎಫೆಕ್ಟ್ ಆಗಿದೆ. ಆದರೆ ಅವರಿಗಿರುವ ಡಿಮ್ಯಾಂಡ್ ಮಾತ್ರ ಕಮ್ಮಿಯಾಗಿಲ್ಲ. ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡ ಮೇಲೆ ಮತ್ತೆ ಸಿನಿಮಾದತ್ತ ನಟಿ ಬರುತ್ತಾರೆ. ಬಾಲಿವುಡ್ ಸಿನಿಮಾಗಳ ಜೊತೆ ಸೌತ್ ಚಿತ್ರಗಳಲ್ಲೂ ಹೆಚ್ಚು ಕಾಣಿಸಿಕೊಳ್ಳುತ್ತಾರೆ.