ರಣಜಿ ಟ್ರೋಫಿ 2025ರ ಮೊದಲ ಸೆಮಿಫೈನಲ್ ಪಂದ್ಯ ಗುಜರಾತ್ ಮತ್ತು ಕೇರಳ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಮೈದಾನ-ಎ ನಲ್ಲಿ ನಡೆಯಿತು. ಈ ಪಂದ್ಯದ 5ನೇ ಮತ್ತು ಕೊನೆಯ ದಿನವಾದ ಇಂದು ಸಚಿನ್ ಬೇಬಿ ನೇತೃತ್ವದ ಕೇರಳ ತಂಡ ಇತಿಹಾಸ ನಿರ್ಮಿಸಿದೆ. 74 ವರ್ಷಗಳ ರಣಜಿ ಟ್ರೋಫಿ ಇತಿಹಾಸದಲ್ಲಿ ಕೇರಳ ತಂಡವು ಮೊದಲ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದಿದೆ. ಕೇರಳ ನಾಯಕ ಸಚಿನ್ ಬೇಬಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುದ್ದೀನ್ ಅವರ ಅದ್ಭುತ 177 ರನ್‌ಗಳ ಶತಕದ ನೆರವಿನಿಂದ ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 457 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಈ ದೊಡ್ಡ ಗುರಿಗೆ ಉತ್ತರವಾಗಿ, ಗುಜರಾತ್ ಬ್ಯಾಟರ್‌ಗಳು ಸಹ ಅದ್ಭುತ ಪ್ರದರ್ಶನ ನೀಡಿದರು. ಗುಜರಾತ್ ತಂಡದ ಆರಂಭಿಕ ಬ್ಯಾಟರ್ ಪ್ರಿಯಾಂಕ್ ಪಾಂಚಾಲ್ 148 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದರು. ಆದರೆ, ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್‌ಗಳ ಮುನ್ನಡೆ ಸಾಧಿಸಿ ಮೊದಲ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆಯಿತು. ಕೇರಳ ನಾಯಕ ಸಚಿನ್ ಬೇಬಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಸ್ಟಾರ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮೊಹಮ್ಮದ್ ಅಜರುದ್ದೀನ್ ಅವರ ಅದ್ಭುತ 177 ರನ್‌ಗಳ ಶತಕದ ನೆರವಿನಿಂದ ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 457 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಈ ದೊಡ್ಡ ಗುರಿಗೆ ಉತ್ತರವಾಗಿ, ಗುಜರಾತ್ ಬ್ಯಾಟರ್‌ಗಳು ಸಹ ಅದ್ಭುತ ಪ್ರದರ್ಶನ ನೀಡಿದರು. ಗುಜರಾತ್ ತಂಡದ ಆರಂಭಿಕ ಬ್ಯಾಟರ್ ಪ್ರಿಯಾಂಕ್ ಪಾಂಚಾಲ್ 148 ರನ್ ಗಳಿಸಿ ಭರ್ಜರಿ ಪ್ರದರ್ಶನ ನೀಡಿದರು. ಆದರೆ, ಕೇರಳ ಮೊದಲ ಇನ್ನಿಂಗ್ಸ್‌ನಲ್ಲಿ 2 ರನ್‌ಗಳ ಮುನ್ನಡೆ ಸಾಧಿಸಿ ಮೊದಲ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆಯಿತು.
ಗುಜರಾತ್ ಬ್ಯಾಟರ್ ಅರ್ಜನ್ ನಾಗವಾಸ್ವಾಲಾ ಅವರು ಸರ್ವಾಟೆ ಎಸೆತದಲ್ಲಿ ಸ್ವೀಪ್ ಶಾಟ್ ಆಡಿದರು. ಅವರ ಅದ್ಭುತ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಾಯಿಸಿತು . ಶಾರ್ಟ್ ಲೆಗ್‌ನಲ್ಲಿ ನಿಂತಿದ್ದ ಫೀಲ್ಡರ್‌ನ ಹೆಲ್ಮೆಟ್‌ಗೆ ಚೆಂಡು ತಗುಲಿ ಮೇಲಕ್ಕೆ ಚಿಮ್ಮಿತು, ಅದನ್ನು ಮೊದಲ ಸ್ಲಿಪ್‌ನಲ್ಲಿ ನಿಂತಿದ್ದ ಸಚಿನ್ ಬೇಬಿ ಸುಲಭವಾಗಿ ಹಿಡಿದರು. ಹೀಗಾಗಿ ಮೊದಲ ಇನ್ನಿಂಗ್ಸ್‌ನ ಆಧಾರದ ಮೇಲೆ, ಕೇರಳ ತಂಡವು ಗುಜರಾತ್‌ಗಿಂತ 2 ರನ್‌ಗಳ ಮುನ್ನಡೆಯೊಂದಿಗೆ ಫೈನಲ್‌ಗೆ ಪ್ರವೇಶಿಸಿತು.