Advertisement
ಬಹ್ರೈನ್: ಪ್ಯಾಲೆಸ್ತೀನ್ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ದ್ವೇಷಪೂರಿತ ಪೋಸ್ಟ್ ಮಾಡಿದ ಹಿನ್ನೆಲೆಯಲ್ಲಿ ಬಹ್ರೇನ್‌ನಲ್ಲಿರುವ ಭಾರತೀಯ ವೈದ್ಯರನ್ನು ಖಾಸಗಿ ಆಸ್ಪತ್ರೆಯ ಆಡಳಿತ ಮಂಡಳಿ ವಜಾಗೊಳಿಸಿದೆ. “ರೊಯಲ್ ಬಹ್ರೈನ್ ಆಸ್ಪತ್ರೆಯ ಆಂತರಿಕ ಔಷಧ ವಿಭಾಗದ ವೈದ್ಯ ಸುನಿಲ್ ಜೆ. ರಾವ್ ಅವರು ಇಸ್ರೇಲ್ ಪರವಾಗಿ ಮತ್ತು ಪ್ಯಾಲೆಸ್ತೀನ್ ವಿರುದ್ಧ ದ್ವೇಷಪೂರಿತ ಪೋಸ್ಟ್‌ಗಳನ್ನು ಹಾಕಿದ್ದರು. ಇದರ ವಿರುಧ್ದ ವ್ಯಾಪಕ ಟೀಕೆಗಳ ನಂತರ, ಸಾಮಾಜಿಕ ಜಾಲತಾಣಗಳ ಮೂಲಕ ಅವರು ಕ್ಷಮೆಯಾಚಿಸಿದ್ದರು. ವೈದ್ಯರ ಪೋಸ್ಟ್ ಸಾಮಾಜಿಕ ಶಿಷ್ಟಾಚಾರ ಉಲ್ಲಂಘನೆ ಹಾಗೂ ಸಂಸ್ಥೆಯ ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇದರನ್ವಯ ಕೆಲಸದಿಂದ ವಜಾಗೊಳಿಸಲಾಗದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
Advertisement