ಸುಳ್ಯದ ಪ್ರತಿಷ್ಠಿತ ಮಾರ್ನಿಂಗ್ ಕ್ರಿಕೆಟ್ ಕ್ಲಬ್(ರಿ.)ಸುಳ್ಯ ಇದರ ವಾರ್ಷಿಕ ಮಹಾಸಭೆಯು ಫೆ 23 ಆದಿತ್ಯವಾರ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನಲ್ಲಿ ಎಂಸಿಸಿ ಇದರ ಸ್ಥಾಪಕಧ್ಯಕ್ಷರಾದ ಹಂಝ ಖಾತೂನ್ ಹಾಗೂ ಅಧ್ಯಕ್ಷರಾದ ರಂಜಿತ್ ಕುಮಾರ್ ಕೆ.ಆರ್ ಮತ್ತು ಕಾರ್ಯದರ್ಶಿ ಝುಬೈರ್ ಇವರ ಉಪಸ್ಥಿತಿಯಲ್ಲಿ ನಡೆಯಿತು. 2025-26 ನೇ ಸಾಲಿನ ಅಧ್ಯಕ್ಷರಾಗಿ ರಂಜಿತ್ ಕುಮಾರ್ ಪುನರಾಯ್ಕೆಯಾದರು. ಉಪಾಧ್ಯಕ್ಷ ಹನೀಫ್ ಜಯನಗರ, ಗೌರವಾಧ್ಯಕ್ಷರಾಗಿ ಗಿರೀಶ್ ಅಡ್ಪಂಗಯ, ಕಾರ್ಯದರ್ಶಿಯಾಗಿ ಬಾಲಕುಮಾರನ್, ಜೊತೆ ಕಾರ್ಯದರ್ಶಿಯಾಗಿ ಮಂಜುನಾಥ, ಕೋಶಾಧಿಕಾರಿಯಾಗಿ ಆಸೀಫ್ ಸ್ಟಾರ್ ಜಯನಗರ, ಕ್ರೀಡಾ ಕಾರ್ಯದರ್ಶಿಯಾಗಿ ಸಮೀರ್ ಪೈಚಾರ್, ಮಾಧ್ಯಮ ವರದಿಗಾರರಾಗಿ ಕಿರಣ, ಹಾಗೂ ನಿರ್ದೇಶಕರಾಗಿ ಇಂದು ಕುಮಾರ್, ಬಶೀರ್, ಸಂತೋಷ್, ನಿಜಗುಣ, ಚಂದ್ರ ಇವರನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಕಾರ್ಯದರ್ಶಿ ಝುಬೈರ್ (ಉಬ್ಬಿ) ಗೌರವಾಧ್ಯಕ್ಷ ಗಿರೀಶ್ ಅಡ್ಪಂಗಾಯ, ಕ್ರೀಡಾ ಕಾರ್ಯದರ್ಶಿ ಆಸಿಫ್ ಸ್ಟಾರ್ ಜಯನಗರ, ಸ್ಥಾಪಕಾಧ್ಯಕ್ಷರಾದ ಹಂಝ ಕಾತೂನ್ ಮೊದಲಾದವರು ಉಪಸ್ಥಿತರಿದ್ದರು.
