ಅಸ್ತಾನ(ಕಜಕಿಸ್ತಾನ್): ಕಲ್ಲಿದ್ದಲು ಗಣಿಯಲ್ಲಿ (Coal Mine) ಸಂಭವಿಸಿದ ಅಗ್ನಿ ಅವಘಡದಲ್ಲಿ (Fire Accident )ಕನಿಷ್ಠ 32 ಜನರು ಸಾವನ್ನಪ್ಪಿದ್ದು, 14 ಮಂದಿ ನಾಪತ್ತೆಯಾದ ಘಟನೆ ಕಜಕಿಸ್ತಾನದಲ್ಲಿ (Kazakhstan) ನಡೆದಿದೆ.
ಲಕ್ಸೆಂಬರ್ಗ್ ಮೂಲದ ಆರ್ಸೆಲರ್ ಮಿತ್ತಲ್ ಟೆಮಿರ್ಟೌ ಕಂಪನಿಯ ಕಲ್ಲಿದ್ದಲು ಘಟಕದಲ್ಲಿ ಈ ಅವಘಡ ಸಂಭವಿಸಿದೆ. ಗಣಿಯಲ್ಲಿ 252 ಜನ ಕೆಲಸ ಮಾಡುತ್ತಿದ್ದರು. ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ 206 ಜನರನ್ನು ರಕ್ಷಿಸಿ ಸ್ಥಳಾಂತರಿಸಲಾಗಿದೆ. ಮೀಥೇನ್ ಅನಿಲ ಸೋರಿಕೆಯಿಂದ ಈ ಅವಘಡ ಸಂಭವಿಸಿದೆ. ಈ ದುರಂತ ಬಹಳ ದುರಾದೃಷ್ಟಕರವಾದದ್ದು ಎಂದು ಕಜಕಿಸ್ತಾನದ ಅಧ್ಯಕ್ಷ ಕಾಸಿಮ್-ಜೋಮಾರ್ಟ್ ಟೊಕಾಯೆವ್ ಹೇಳಿದ್ದಾರೆ. ದುರಂತದ ಬಳಿಕ, ಮಿತ್ತಲ್ ಸಂಸ್ಥೆಯೊಂದಿಗಿನ ಸರ್ಕಾರದ ಹೂಡಿಕೆಯನ್ನು ವಾಪಸ್ ಪಡೆಯಲು ಆದೇಶಿಸಲಾಗಿದೆ. ಅಲ್ಲದೇ ಕಂಪನಿಯ ಘಟಕಗಳನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ. ಸುರಕ್ಷತಾ ನಿಯಮಗಳನ್ನು ಪಾಲಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲೂ ಅಗ್ನಿ ಅವಘಡ ಸಂಭವಿಸಿ 9 ಜನ ಸಾವನ್ನಪ್ಪಿದ್ದರು. ಈ ವೇಳೆ ಪರಿಸರ ನಿಯಮಗಳ ಉಲ್ಲಂಘನೆ ಮಾಡಿದೆ ಎಂಬ ಆರೋಪ ಕೇಳಿ ಬಂದಿತ್ತು. ಆರ್ಸೆಲರ್ ಮಿತ್ತಲ್ ಟೆಮಿರ್ಟೌ ಲಕ್ಸೆಂಬರ್ಗ್ ಮೂಲದ ಬಹುರಾಷ್ಟ್ರೀಯ ಕಂಪನಿಯಾಗಿದ್ದು, ಇದು ವಿಶ್ವದ ಎರಡನೇ ಅತಿ ದೊಡ್ಡ ಉಕ್ಕನ್ನು ಉತ್ಪಾದಿಸುತ್ತದೆ.
ಕಾಸರಗೋಡು ಮೂಲದ ಹಾಶಿಂ ಸೆರೆ ಕಳೆದ ಒಂದು ತಿಂಗಳ ಹಿಂದೆ ಸುಳ್ಯ ಜಟ್ಟಿಪಳ್ಳದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಮೋಹನದಾಸ ಮುದ್ಯರವರ…
ಲಂಡನ್: ಕಳೆದ ತಿಂಗಳು ಯುಕೆಯಲ್ಲಿ ನಾಪತ್ತೆಯಾಗಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿ ಲಂಡನ್‌ನ (London) ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.…
ಸುಳ್ಯ: ಡಿ೧, ಮಡಿಕೇರಿಯ ಎರಡನೇ ಮಣ್ಣಗೇರಿಯ ನಿವಾಸಿ ವೆಂಕಟರಮಣ ಎಂಬುವವರು ಅರಂಬೂರು ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದ್ದು, ಮೃತ…
ತಿರುವನಂತಪುರಂ: ಚಕ್ಕುಲಿ (Murukku) ಗಂಟಲಲ್ಲಿ ಸಿಲುಕಿಕೊಂಡು ಒಂದೂವರೆ ವರ್ಷದ ಪುಟ್ಟ ಕಂದಮ್ಮ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಕೇರಳದಲ್ಲಿ (Kerala) ನಡೆದಿದೆ. ಮೃತ…
ತಿರುವನಂತಪುರ: ಮಲಯಾಳಂನ ಖ್ಯಾತ ನಟಿ ಆರ್. ಸುಬ್ಬಲಕ್ಷ್ಮಿ (87) ಅವರು ನಿಧನರಾಗಿದ್ದಾರೆ. ಗುರುವಾರ ರಾತ್ರಿ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ…
ಬರೋಬ್ಬರಿ ₹3.16 ಕೋಟಿ ಬಿಲ್ ಬಾಕಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟಿ20 ಪಂದ್ಯ ರಾಯ್‌ಪುರದ ಶಹೀದ್…