Categories: ಯುರೋಪ್

ಹಾಟ್‌ ಟಬ್‌ನಲ್ಲಿ ಮುಳುಗಿ ಸತ್ತ ಕೆನಡಾ ಪ್ರಧಾನಿ ಗೆಳೆಯ ಹಾಗೂ ‘ಫ್ರೆಂಡ್ಸ್’ ಸ್ಟಾರ್‌ ನಟ ಮ್ಯಾಥ್ಯೂ ಪೆರ್ರಿ!

Advertisement
Advertisement
Advertisement

ವಾಷಿಂಗ್ಟನ್‌ ಡಿಸಿ (ಅಕ್ಟೋಬರ್ 29, 2023): ಅಮೆರಿಕದ ಪ್ರಸಿದ್ಧ ನಟ ಮ್ಯಾಥ್ಯೂ ಪೆರ್ರಿ 54ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಇದು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. 90 ರ ದಶಕದ ಜನಪ್ರಿಯ ಟಿವಿ ಸೀರಿಸ್‌ ಫ್ರೆಂಡ್ಸ್‌ನಲ್ಲಿ ಚಾಂಡ್ಲರ್ ಬಿಂಗ್ ಪಾತ್ರಕ್ಕಾಗಿ ಪ್ರಸಿದ್ಧವಾದ ನಟ ಶನಿವಾರ ಮೃತಪಟ್ಟಿದ್ದಾರೆ ಎಂದು ಕಾನೂನು ಜಾರಿ ಮೂಲಗಳು ಅಮೆರಿಕ ಮಾಧ್ಯಮಗಳಿಗೆ ಮಾಹಿತಿ ನೀಡಿವೆ.

ಈ ಹಿನ್ನೆಲೆ ಮ್ಯಾಥ್ಯೂ ಪೆರ್ರಿಯ ಇನ್ಸ್ಟಾಗ್ರಾಮ್‌ ಕೊನೆಯ ಪೋಸ್ಟ್‌ ವೈರಲ್‌ ಆಗ್ತಿದ್ದು, ಅಭಿಮಾನಿಗಳನ್ನು ಭಾವೋದ್ವೇಗಕ್ಕೊಳಗಾಗಿಸಿದೆ. 5 ದಿನಗಳ ಹಿಂದೆ ಹಾಕಿದ್ದ ಈ ಪೋಸ್ಟ್‌ನಲ್ಲಿ ನಟ ನಮ್ಮ ಮನೆಯ ಜಕುಝಿಯಲ್ಲಿ ಅಂದರೆ ಬಿಸಿ ನೀರಿನ ಅಥವಾ ಬೆಚ್ಚಗಿನ ನೀರಿನ ಟಬ್‌ನಲ್ಲಿ ತಮ್ಮ ರಾತ್ರಿಯನ್ನು ಆನಂದಿಸುತ್ತಿದ್ದರು. ಈಗ ತನ್ನ ಲಾಸ್ ಏಂಜಲೀಸ್ ಮನೆಯ ಅದೇ ಬಿಸಿ ನೀರಿನ ಟಬ್‌ನಲ್ಲೇ ಫ್ರೆಂಡ್ಸ್‌ ಸೀರಿಸ್‌ ನಟ ಮೃತಪಟ್ಟಿದ್ದಾರೆ. ಮ್ಯಾಥ್ಯೂ ಪೆರಿಯ ಕೊನೆಯ ಪೋಸ್ಟ್‌ನಲ್ಲಿ ಚಂದ್ರನ ಬೆಳಕಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹಿನ್ನಲೆಯಲ್ಲಿ ರಮಣೀಯ ನಗರ ವೀಕ್ಷಣೆಯೊಂದಿಗೆ, ಹಾಸ್ಯದ ಶೀರ್ಷಿಕೆಯೊಂದಿಗೆ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ಗೆ ಅವರು “ಓಹ್, ಬೆಚ್ಚಗಿನ ನೀರು ಸುತ್ತಲೂ ಸುತ್ತುವುದು ನಿಮಗೆ ಒಳ್ಳೆಯದನ್ನು ನೀಡುತ್ತದೆಯೇ? ನಾನು ಮ್ಯಾಟ್‌ಮ್ಯಾನ್.” ಎಂಬ ಕ್ಯಾಪ್ಷನ್‌ ಹಂಚಿಕೊಂಡಿದ್ರು. “ಫ್ರೆಂಡ್ಸ್” 1994 ರಿಂದ 2004 ರವರೆಗೆ NBC ನೆಟ್ವರ್ಕ್‌ನಲ್ಲಿ ಪ್ರಸಾರವಾಗುತ್ತಿದ್ದು, ಆರು ಯುವ ಸ್ನೇಹಿತರ ಜೀವನವನ್ನು ಈ ಕತೆ ಅನುಸರಿಸಿದೆ. ಈ ಸರಣಿಯ ಅಂತಿಮ ಸಂಚಿಕೆಯನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಂದಾಜು 52.5 ಮಿಲಿಯನ್ ಅಂದರೆ 5.25 ಕೋಟಿ ವೀಕ್ಷಕರು ವೀಕ್ಷಿಸಿದರು, ಇದು ದಶಕದ ಅತಿ ಹೆಚ್ಚು ರೇಟಿಂಗ್ ಪಡೆದ ದೂರದರ್ಶನ ಸಂಚಿಕೆಯಾಗಿದೆ.10 ಸೀಸನ್‌ಗಳವರೆಗೆ ನಡೆದ ಅತ್ಯಂತ ಯಶಸ್ವಿ “ಫ್ರೆಂಡ್ಸ್” ನಲ್ಲಿ ಬಿಂಗ್ ಪಾತ್ರಕ್ಕಾಗಿ ಪೆರ್ರಿ ಹೆಚ್ಚು ಹೆಸರುವಾಸಿಯಾಗಿದ್ದರು, ಜೆನ್ನಿಫರ್ ಆನಿಸ್ಟನ್, ಕೋರ್ಟೆನಿ ಕಾಕ್ಸ್, ಡೇವಿಡ್ ಶ್ವಿಮ್ಮರ್, ಮ್ಯಾಟ್ ಲೆಬ್ಲಾಂಕ್ ಮತ್ತು ಲಿಸಾ ಕುಡ್ರೋ ಈ ಸೀರಿಸ್‌ನ ಸಹ-ನಟರಾಗಿದ್ದರು. 1969 ರಲ್ಲಿ ಮೆಸಚೂಸೆಟ್ಸ್‌ನಲ್ಲಿ ಜನಿಸಿದ ಪೆರ್ರಿ ಕೆನಡಾದ ಒಟ್ಟಾವಾದಲ್ಲಿ ಬೆಳೆದಿದ್ದು, ಅಲ್ಲಿ ಅವರು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೋ ಅವರೊಂದಿಗೆ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಮ್ಯಾಥ್ಯೂ ಪೆರ್ರಿ ಹೆಚ್ಚು ಕುಡಿತದ ದಾಸರಾಗಿದ್ದರು. ಗೇಮ್‌ವೊಂದನ್ನು ಆಡಿ ಲಾಸ್‌ ಏಂಜಲೀಸ್‌ನ ಮನೆಗೆ ಹಿಂದಿರುಗಿದ ನಂತರ ಮ್ಯಾಥ್ಯೂ ನಿಧನರಾಗಿದ್ದಾರೆ. TMZ ನ ವರದಿಯ ಪ್ರಕಾರ, ನಟ ತನ್ನ ಸಹಾಯಕನನ್ನು ಕೆಲಸಕ್ಕಾಗಿ ಹೊರಗೆ ಕಳುಹಿಸಿದ್ದರು ಅವರು ಸುಮಾರು ಎರಡು ಗಂಟೆಗಳ ನಂತರ ಹಿಂತಿರುಗಿದ ವೇಳೆ ಹಾಟ್‌ ಟಬ್‌ನಲ್ಲಿ ಪೆರ್ರಿ ಪ್ರತಿಕ್ರಿಯೆ ನೀಡದ ಕಾರಣ ಅವರುತುರ್ತು ಸಹಾಯಕ್ಕಾಗಿ 911 ಅನ್ನು ಡಯಲ್ ಮಾಡಿದರು. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಡ್ರಗ್ಸ್‌ ಪತ್ತೆಯಾಗಿಲ್ಲ ಎಂದು ವರದಿಯಾಗಿದ್ದು, ಕೊಲೆಯಾಗಿರುವ ಬಗ್ಗೆಯೂ ಯಾವುದೇ ಸುಳಿವು ಪತ್ತೆಯಾಗಿಲ್ಲ.

Advertisement
namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Recent Posts

Advertisement

ಜಟ್ಟಿಪಳ್ಳ: ಮನೆಯಿಂದ ಕಳವು ಪ್ರಕರಣ; ಕಳ್ಳನ ಹೆಡೆಮುರಿ ಕಟ್ಟಿದ ಪೋಲಿಸರು,

ಕಾಸರಗೋಡು ಮೂಲದ ಹಾಶಿಂ ಸೆರೆ ಕಳೆದ ಒಂದು‌ ತಿಂಗಳ ಹಿಂದೆ ಸುಳ್ಯ ಜಟ್ಟಿಪಳ್ಳದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಮೋಹನದಾಸ ಮುದ್ಯರವರ…

3 days ago

ತಿಂಗಳ ಹಿಂದೆ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿ ಲಂಡನ್‌ ನದಿಯಲ್ಲಿ ಶವವಾಗಿ ಪತ್ತೆ

ಲಂಡನ್: ಕಳೆದ ತಿಂಗಳು ಯುಕೆಯಲ್ಲಿ ನಾಪತ್ತೆಯಾಗಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿ ಲಂಡನ್‌ನ (London) ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.…

4 days ago

ಅರಂಬೂರು: ಹೊಳೆಯಲ್ಲಿ ಮುಳುಗಿದ ವ್ಯಕ್ತಿ; ಶವ ಮೇಲೆತ್ತಿದ ಪೈಚಾರ್ ಮುಳುಗು ತಜ್ಞರ ತಂಡ

ಸುಳ್ಯ: ಡಿ೧, ಮಡಿಕೇರಿಯ ಎರಡನೇ ಮಣ್ಣಗೇರಿಯ ನಿವಾಸಿ ವೆಂಕಟರಮಣ ಎಂಬುವವರು ಅರಂಬೂರು ಹೊಳೆಯಲ್ಲಿ ಮುಳುಗಿ‌ ಮೃತಪಟ್ಟ ಘಟನೆ ನಡೆದಿದ್ದು, ಮೃತ…

4 days ago

ಗಂಟಲಲ್ಲಿ ಚಕ್ಕುಲಿ ಸಿಲುಕಿಕೊಂಡು ಪುಟ್ಟ ಕಂದಮ್ಮ ದುರ್ಮರಣ

ತಿರುವನಂತಪುರಂ: ಚಕ್ಕುಲಿ (Murukku) ಗಂಟಲಲ್ಲಿ ಸಿಲುಕಿಕೊಂಡು ಒಂದೂವರೆ ವರ್ಷದ ಪುಟ್ಟ ಕಂದಮ್ಮ ಕೊನೆಯುಸಿರೆಳೆದ ಹೃದಯವಿದ್ರಾವಕ ಘಟನೆ ಕೇರಳದಲ್ಲಿ (Kerala) ನಡೆದಿದೆ. ಮೃತ…

4 days ago

ಮಲಯಾಳಂನ ಖ್ಯಾತ ಹಿರಿಯ ನಟಿ ಆರ್‌. ಸುಬ್ಬಲಕ್ಷ್ಮಿ ನಿಧನ

ತಿರುವನಂತಪುರ: ಮಲಯಾಳಂನ ಖ್ಯಾತ ನಟಿ ಆರ್‌. ಸುಬ್ಬಲಕ್ಷ್ಮಿ (87) ಅವರು ನಿಧನರಾಗಿದ್ದಾರೆ. ಗುರುವಾರ ರಾತ್ರಿ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ…

4 days ago

ಭಾರತ-ಆಸೀಸ್‌‌ ಪಂದ್ಯಕ್ಕೆ ಎದುರಾಯ್ತು ಹೊಸ ಸಂಕಷ್ಟ! ಇದು ಮಳೆಯಲ್ಲ ಕರೆಂಟ್‌‌ ಸಮಸ್ಯೆ

ಬರೋಬ್ಬರಿ ₹3.16 ಕೋಟಿ ಬಿಲ್ ಬಾಕಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟಿ20 ಪಂದ್ಯ ರಾಯ್‌ಪುರದ ಶಹೀದ್…

4 days ago
Advertisement
Advertisement