ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಐಕ್ಯುಎಸಿ ಮತ್ತುವ್ಯವಹಾರ ಆಡಳಿತ ವಿಭಾಗ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಏಕತಾದಿನಾಚರಣೆಯನ್ನು ದಿನಾಂಕ 31.10.2023ರಂದು ಆಚರಿಸಲಾಯಿತು. ಸರ್ದಾರ್ ವಲ್ಲಭಬಾಯಿ ಪಟೇಲ್ ಇವರ ಜನ್ಮದಿನಾಚರಣೆಯಸ್ಮರಣಾರ್ಥ ನಡೆದ ಈ ಕಾರ್ಯಕ್ರಮದ ಈ ಅಧ್ಯಕ್ಷತೆಯನ್ನು ಕಾಲೇಜಿನಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ ಇವರು ವಹಿಸಿದ್ದರು. ರಾಷ್ಟ್ರೀಯ ಏಕತಾ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಡಾ. ಮಮತಾಕೆ, ಐಕ್ಯುಎಸಿ ಸಂಯೋಜಕಿ ಇವರು ಬೋಧಿಸಿದರು. ಶ್ರೀಮತಿಅನಂತಲಕ್ಷ್ಮಿ, ವಿಭಾಗ ಮುಖ್ಯಸ್ಥರು, ವ್ಯವಹಾರ ಆಡಳಿತ ವಿಭಾಗ ಇವರುಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿ ಕ್ಷೇಮಪಾಲನಾಅಧಿಕಾರಿಗಳಾದ ಶ್ರೀಮತಿ ರತ್ನಾವತಿ ಡಿ. ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ಬೋಧಕ/ಬೋಧಕೇತರ ವೃಂದಮತ್ತು ವಿದ್ಯಾರ್ಥಿ ಸಮೂಹ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ರಾಷ್ಟ್ರೀಯ ಏಕತಾ ದಿನಾಚರಣೆಯ ಪ್ರಯುಕ್ತ ವಿದ್ಯಾರ್ಥಿಗಳಿಗೆ“ಕೊಲಾಜ್” ತಯಾರಿಕಾ ಸ್ಪರ್ಧೆಯನ್ನು ಆಯೋಜಿಸಿ, ಬಹುಮಾನವಿತರಣೆಯನ್ನು ಮಾಡಲಾಯಿತು. ಶ್ರೀಮತಿ ಲೀನಾ ಉಪನ್ಯಾಸಕಿವ್ಯವಹಾರ ಆಡಳಿತ ವಿಭಾಗ, ಕಾರ್ಯಕ್ರಮಕ್ಕೆ ವಂದಿಸಿದರು.