Advertisement

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದು ಅದರಲ್ಲಿ ಸಂಸ್ಥೆಗಳಿಗೆ ಕೊಡಮಾಡಲ್ಪಡುವ ಪ್ರಶಸ್ತಿಗೆ ದ.ಕ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ,ಮೀಪ್,ಗೆ ಪ್ರಶಸ್ತಿ ಲಭಿಸಿದೆ.
ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಒಕ್ಕೂಟದ ಪ್ರಸ್ತುತ ಉಪಾಧ್ಯಕ್ಷರಾಗಿರುವ ಮುಸ್ತಫಾ ಸುಳ್ಯರವರು ಹರ್ಷ ವ್ಯಕ್ತಪಡಿಸಿರುತ್ತಾರೆ.
ಮಾಜಿ ಸಚಿವರಾದ ಬಿ.ಎ ಮೊಯ್ದೀನ್ ರವರು ಸ್ಥಾಪಿಸಿರುವ ಅವಿಭಜಿತ ದ.ಕ ಜಿಲ್ಲೆಯಲ್ಲಿ 180 ಶಿಕ್ಷಣ ಸಂಸ್ಥೆಗಳು ನೊಂದಾಯಿಸಲ್ಪಟ್ಟಿದ್ದು ಆಡಳಿತ ಸಮಿತಿ, ಶಿಕ್ಷಕರು ಹಾಗೂ ಪೋಷಕರಿಗೆ ತರಬೇತಿ ಸಮನ್ವಯತೆ ಮತ್ತು ವೃತ್ತಿ ಮಾರ್ಗದರ್ಶನ ಉದ್ಯೋಗ ಮಾಹಿತಿ ಮತ್ತು ಸರಕಾರದ ಸವಲತ್ತು ಗಳ ಕಾರ್ಯಾಗಾರ ನಡೆಸಿಕೊಂಡು ಬರುತ್ತಿರುವ ಸಂಸ್ಥೆ ಅಲ್ಲದೇ ಬಡ ಮತ್ತು ಅನಾಥ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಂಗಳೂರು ಮತ್ತು ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತವಾಗಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿ ಕೊಟ್ಟಿರುತ್ತಾರೆ.
ಅಲ್ಲದೇ ನಿರಂತರ ಅನೇಕ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯನ್ನು ಸಲ್ಲಿಸಿದ ಸಂಸ್ಥೆಯಾಗಿರುತ್ತದೆ.

Advertisement

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ