ಕುವೈತ್ CBSE ಕ್ಲಸ್ಟರ್ ಅಥ್ಲೆಟಿಕ್ಸ್‌ನ 19 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ 100 ಮೀ ಮತ್ತು 200 ಮೀ ಓಟದಲ್ಲಿ ನಿಹಾಲ್ ಕಮಾಲ್ ಅಜ್ಜಾವರ ಚಿನ್ನದ ಪದಕ ಗಳಿಸಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಛತ್ತೀಸ್‌ಘಡ್’ನ ರಾಯಾಪುರದಲ್ಲಿ ನವೆಂಬರ್ 5 ರಿಂದ 7 ರವರೆಗೆ ನಡೆಯಲಿರುವ ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದಾರೆ.

ಕಳೆದ ಶೈಕ್ಷಣಿಕ ವರ್ಷದಲ್ಲಿ, 14 ವರ್ಷದೊಳಗಿನ ಬಾಲಕರ
100 ಮೀಟರ್ ಓಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 7ನೇ ಸ್ಥಾನ ಪಡೆದಿದ್ದರು.

ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಮತ್ತು ಕುವೈತ್ ನಲ್ಲಿ ಉದ್ಯಮಿಯಾಗಿರುವ ಕಮಾಲ್ ಅಜ್ಜಾವರ ಮತ್ತು ಕುವೈತ್ ಸರ್ಕಾರದ ಒಡೆತನದ ಕುವೈತ್ ಆಯಿಲ್ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ರಹೀನಾ ಕಮಾಲ್ ಅವರ ಪುತ್ರ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ