Categories: ಕ್ರೈಂ

ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ವೇಶ್ಯಾವಾಟಿಕೆ ದಂಧೆ ದೃಶ್ಯ ಸೆರೆಹಿಡಿದ ಯೂಟ್ಯೂಬರ್: ಆತನ ಪಾಡು ನೀವೇ ನೋಡಿ..!

ಬೆಂಗಳೂರು (ನ.01): ಬೆಂಗಳೂರಿನ ಹೃದಯಭಾಗ ಹಾಗೂ ಅತ್ಯಂತ ಜನನಿಬಿಡ ಪ್ರದೇಶವಾದ ಮೆಜೆಸ್ಟಿಕ್‌ನ ಅಂಡರ್‌ಪಾಸ್‌ನಲ್ಲಿ ನಡೆಯುವ ವೇಶ್ಯಾವಾಟಿಕೆ ದಂಧೆಯ ಕುರಿತು ಯೂಟ್ಯೂಬರ್‌ ವಿಕಾಸ್‌ಗೌಡ ವಿಡಿಯೋ ಮಾಡಿದ್ದಾನೆ. ವಿಡಿಯೋ ಮಾಡುವಾಗ ಸಿಕ್ಕಿಬಿದ್ದ ಆತನ ಪಾಡು ನಿವೇ ನೋಡಿ. ರಾಜ್ಯ ರಾಜಧಾನಿ ಬೆಂಗಳೂರಿನ ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ವೇಶ್ಯಾವಾಟಿಕೆ ನಡೆಯತ್ತದೆ ಎಂದು ಹಲವು ಪ್ರಯಾಣಿಕರು ಹೇಳುತ್ತಾರೆ. ಇನ್ನು ಹಳ್ಳಿಗಳಿಂದ ಬಂದು ಬೆಂಗಳೂರಿನ ಮೆಜೆಸ್ಟಿಕ್‌ ಅಂಡರ್‌ಪಾಸ್‌ ಹಾದುಹೋದ ಎಲ್ಲರ ಬಾಯಲ್ಲಿಯೂ ಇದೇ ಸುದ್ದು ಹರಿದಾಡುತ್ತದೆ. ಇನ್ನು ಬೆಂಗಳೂರಿಗರು ಇದನ್ನು ನೋಡಿಯೂ ನೋಡದಂತೆ ದಿನನಿತ್ಯ ಓಡಾಡುತ್ತಿದ್ದಾರೆ. ಇದನ್ನು ಹಲವು ಬಾರಿ ಮಾಧ್ಯಮಗಳಲ್ಲಿ ವರದಿ ಮಾಡಿದಾಗ ಪೊಲೀಸರು ಒಂದು ವಾರ ಸಿಬ್ಬಂದಿ ನಿಯೋಜನೆ ಮಾಡಿ ಕ್ರಮ ಕೈಗೊಳ್ಳುತ್ತಾರೆ. ನಂತರ ಅದೇ ಹಾಡು.. ಅದೇ ರಾಗ ಎನ್ನುವಂತೆ ಲೈಂಗಿಕ ಅಲ್ಪಸಂಖ್ಯಾತರು ಮತ್ತು ಮಹಿಳೆಯರು ಪುರುಷರನ್ನು ಅಡ್ಡಹಾಕಿ ವೇಶ್ಯಾವಾಟಿಕೆಗೆ ಪುಸಲಾಯಿಸುವ ಘಟನೆಗಳು ಕಂಡುಬರುತ್ತವೆ. ಈಗ ವಿಕಾಸ್‌ಗೌಡ ಎನ್ನುವ ಯೂಟ್ಯೂಬರ್‌ ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ವಿಡಿಯೋ ಮಾಡಿದ್ದು, ಆತನಿಗೆ ದಂಧೆ ಮಾಡುವವರು ಕೊಟ್ಟ ಕಿರುಕುಳವನ್ನು ನೀಡಿದ ಘಟನೆ ವರದಿಯಾಗಿದೆ. ಪೊಲೀಸ್‌ ಇಲಾಖೆಯಿಂದ ರಾಜ್ಯಾದ್ಯಂತ ಎಲ್ಲೇ ವೇಶ್ಯಾವಾಟಿಕೆ ದಂಧೆ ನಡೆದರೂ ಅವರನ್ನು ಮುಲಾಜಿಲ್ಲದೇ ಬಂಧಿಸಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಇನ್ನು ಲೈಂಗಿಕ ಅಲ್ಪ ಸಂಖ್ಯಾತರು ಕೂಡ ದಂಧೆ ನಡೆಸದಂತೆ ಕಠಿಣ ಕ್ರಮ ಕೈಗೊಂಡಿದ್ದಾರೆ. ಆದರೆ, ರಾಜ್ಯ ರಾಜಧಾನಿ ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್‌ನ ಅಂಡರ್‌ಪಾಸ್‌ನಲ್ಲಿ (ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಅಂಡರ್‌ಪಾಸ್‌) ವೇಶ್ಯಾವಾಟಿಕೆ ದಂಧೆ ಮಾಡಲಾಗುತ್ತಿದೆ ಎಂದರೆ ನಾಚಿಕೆಗೇಡಿನ ವಿಚಾರವಾಗಿದೆ. ಮೆಜೆಸ್ಟಿಕ್‌ ಅಂಡರ್‌ಪಾಸ್‌ನಲ್ಲಿ ಯೂಟ್ಯೂಬರ್‌ ವಿಕಾಸ್‌ಗೌಡ ಸೆಲ್ಫಿ ವಿಡಿಯೋ ಮಾಡುತ್ತಾ ನಡೆದುಕೊಂಡು ಹೋಗುತ್ತಾನೆ. ಆಗ ಪಕ್ಕದಲ್ಲಿಯೇ ಮಹಿಳೆಯೊಬ್ಬರು ವ್ಯಕ್ತಿಯನ್ನು ನಿಲ್ಲಿಸಿಕೊಂಡು ವ್ಯವಹಾರ ಕುದುರಿಸುತ್ತಿರುವ ವಿಡಿಯೋ ಕೂಡ ಸೆರೆಯಾಗಿದೆ. ಜೊತೆಗೆ, ಮುಂದಕ್ಕೆ ಹೋಗುತ್ತಿದ್ದಂತೆ ಐದಾರು ಜನರು ಸೇರಿಕೊಂಡು ಯ್ಯೂಟೂಬರ್‌ನನ್ನು ಪ್ರಶ್ನೆ ಮಾಡಿ ವಿಡಿಯೋ ಮಾಡದಂತೆ ಹೇಳಿದ್ದಾರೆ. ನಂತರ, ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಎಲ್ಲ ವಿಡಿಯೋ ಡಿಲೀಟ್‌ ಮಾಡಿಸಿದ್ದಾರೆ. ನಂತರ, ಅವರ ಎಲ್ಲ ಮಾಹಿತಿಯನ್ನು ಪಡೆದುಕೊಂಡು ಅಲ್ಲಿಂದ ಕಳಿಸಿದ್ದಾರೆ. ಕೊನೆಗೆ ಒಬ್ಬ ಮಹಿಳೆ ಯ್ಯೂಟೂಬರ್‌ನನ್ನು ದಂಧೆಗೆ ಪುಸಲಾಯಿಸಿದ ಘಟನೆ ಕೂಡ ನಡೆದಿದೆ.

namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Recent Posts

ಸುಳ್ಯ: ಕಾಡಿನಲ್ಲಿ ಕೊಳೆತ ತಲೆಬುರುಡೆ, ಚೀಲ ಪತ್ತೆ

ಕಾಡಿನಲ್ಲಿ ಕೊಳೆತ ತಲೆಬುರುಡೆ ಹಾಗೂ ಚೀಲ ಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಳಿನೆಲೆ ಗ್ರಾಮದ ಚಂದ್ರಶೇಖರ್…

5 hours ago

ಮಲಪ್ಪುರಂ: ಕಡಲುಂಡಿ ನದಿಯಲ್ಲಿ ಮುಳುಗಿ ಸಹೋದರಿಯರು ಸಾವು

ಮಲಪ್ಪುರಂ: ಮಲಪ್ಪುರಂ ಸಮೀಪದ ಉರಕಂ ಕೊಟ್ಟುಮಲ ಎಂಬಲ್ಲಿನ ಕಡಲುಂಡಿ ನದಿಯಲ್ಲಿ ಇಬ್ಬರು ಸಹೋದರಿಯರು ಮುಳುಗಿ ಮೃತಪಟ್ಟ ಘಟನೆ ಗುರುವಾರ ಸಂಜೆ…

1 day ago

ಭಾರತದಲ್ಲಿ ನೆಸ್ಲೆ ಉತ್ಪನ್ನಗಳಲ್ಲಿ ಹೆಚ್ಚಿನ ಸಕ್ಕರೆ ಅಂಶ, ತನಿಖೆ ನಡೆಸಲು FSSAIಗೆ ಸೂಚನೆ

ಹೊಸದಿಲ್ಲಿ: ಭಾರತ ಸೇರಿದಂತೆ ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಾರಾಟವಾಗುವ ನೆಸ್ಲೆ ಉತ್ಪನ್ನಗಳಲ್ಲಿ ಮಾತ್ರ ಸಕ್ಕರೆ ಅಂಶ ಹೆಚ್ಚಿರುತ್ತದೆ ಎಂದು…

1 day ago

ಕಾಸರಗೋಡು : ಸಿಪಿಎಂ ಮುಖಂಡನಿಂದ ನಕಲಿ ಮತದಾನ ಆರೋಪ: ಚುನಾವಣಾ ಸಿಬ್ಬಂದಿ ಅಮಾನತು

ಕಾಸರಗೋಡು ಲೋಕಸಭಾ ಕ್ಷೇತ್ರದ ಕಲ್ಯಾಶ್ಯೇರಿ ಯಲ್ಲಿ 92 ರ ಹರೆಯದ ವೃದ್ಧೆಯ ಹೆಸರಲ್ಲಿ ನಕಲಿ ಮತದಾನದ ಬಗ್ಗೆ ಆರೋಪ ಉಂಟಾಗಿದ್ದು ,…

1 day ago

ಮದರಸ ಶೈಕ್ಷಣಿಕ ವರ್ಷ ಪ್ರಾರಂಬೊತ್ಸವ ಫತಃಹೇ ಮುಬಾರಕ್ – 2024

ರಂಜಾನ್ ತಿಂಗಳ ಸುಧೀರ್ಘ ವಾರ್ಷಿಕ ರಜೆಯ ನಂತರ ಇಂದು ಏಕ ಕಾಲದಲ್ಲಿ ಮದರಸ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಇಂದು ಗಾಂಧಿನಗರ…

1 day ago

ಮೊಗರ್ಪಣೆ ಬಳಿ ದೋಸ್ತ್ ಗಾಡಿ ಅಪಘಾತ

ಸುಳ್ಯ: ರಾತ್ರಿ ಸುರಿದ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ದೋಸ್ತ್ ಗಾಡಿ ರಸ್ತೆ ಬದಿಯಲ್ಲಿರುವ ರೋಡ್ ಬ್ಯಾರಿಯರ್ ಗೆ ಡಿಕ್ಕಿ…

3 days ago