ನೆಹರು ಮೆಮೋರಿಯಲ್ ಕಾಲೇಜು ಸುಳ್ಯ ಇದರ ಅರ್ಥಶಾಸ್ತ್ರ ವಿಭಾಗದವತಿಯಿಂದ ಭಾರತದ ಹಸಿರುಕ್ರಾಂತಿಯ ಪಿತಾಮಹ ಪ್ರೊ. ಎಂ. ಎಸ್ ಸ್ವಾಮಿನಾಥನ್ ಅವರಿಗೆ ಗೌರವಾರ್ಪಣೆ ಹಾಗೂ ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ವಿಶಿಷ್ಟ ಶೈಕ್ಷಣಿಕ ಸಾಧನೆಗೈದಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮನಡೆಯಿತು. ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಪ್ರೊ. ಎಂ. ಎಸ್ ಸ್ವಾಮಿನಾಥನ್ ಅವರ ಜೀವನ ಸಾಧನೆಗಳನ್ನು ಮೆಲುಕು ಹಾಕಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಆಗಸ್ಟ್ 2023ರ ಪರೀಕ್ಷೆಯಲ್ಲಿಸಂಖ್ಯಾಶಾಸ್ರ್ತ ವಿಷಯದಲ್ಲಿ 100/100 ಅಂಕಗಳಿಸಿದ ಪ್ರತಿಭಾನ್ವಿತವಿದ್ಯಾರ್ಥಿಗಳಾದ ಫರ್ಜಾನಾ ಬಿ ಮತ್ತು ಕೃಷ್ಣವೇಣಿ ಇ.ವಿ ಇವರನ್ನುಅರ್ಥಶಾಸ್ತ್ರ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಘನಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರುದ್ರಕುಮಾರ್ ಎಂ.ಎಂ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ವಿಜಯಲಕ್ಷ್ಮಿ ಎನ್. ಎಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಐಕ್ಯುಎಸಿಸಂಯೋಜಕರಾದ ಡಾ. ಮಮತಾ ಕೆ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರನೀಡಲಾಯಿತು.