Advertisement
ಬಂದಡ್ಕ ಭಾಗದಿಂದ ಕೋಲ್ಚಾರು-ನಾರ್ಕೋಡು ರಸ್ತೆಯಾಗಿ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದ ತೆಲುಂಗಾಣ ನೋಂದಣಿ ಸ್ವಿಫ್ಟ್ ಡಿಝೈರ್ ಕಾರೊಂದು ಕಳೆದ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ನಾರ್ಕೋಡು ಬಳಿ ಜೆ.ಕೆ.ರೈ ಯವರ ತೋಟಕ್ಕುರುಳಿದ ಘಟನೆ ನಡೆದಿದೆ. ಪ್ರಯಾಣಿಕರು ಹೈದರಾಬಾದ್ ಮೂಲದವರಾಗಿದ್ದು, ಕನ್ಯಾಕುಮಾರಿ , ಗುರುವಾಯೂರು ದೇವಸ್ಥಾನಗಳಿಗೆ ಭೇಟಿ ನೀಡಿ ನಂತರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ದರ್ಶನ ಮಾಡಲು ತೆರಳುತ್ತಿರುವ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ. ಕಾರಿನಲ್ಲಿ ಇಬ್ಬರು ಮಹಿಳೆಯರು ಸೇರಿ ಒಟ್ಟು ನಾಲ್ಕು ಮಂದಿ ಪ್ರಯಾಣಿಸುತ್ತಿದ್ದು ಎಲ್ಲರಿಗೂ ಅಲ್ಪಸ್ವಲ್ಪ ಗಾಯಗಳಾಗಿದ್ದು, ತಕ್ಷಣ ಸ್ಥಳೀಯರು ಸ್ಥಳಕ್ಕೆ ಜಮಾಯಿಸಿ ಗಾಯಾಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.
Advertisement