ಕರ್ನಾಟಕ ಸುವರ್ಣ ಸಂಭ್ರಮ -50 ರ ಹಿನ್ನಲೆಯಲ್ಲಿ 2 ದಶಕಗಳ ಶೈಕ್ಷಣಿಕ ಸೇವೆಗೆ ಕರ್ನಾಟಕ ರಾಜ್ಯ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಮೀಫ್ ಸಂಸ್ಥೆಯ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ಮತ್ತು ಪದಾಧಿಕಾರಿಗಳಿಗೆ ಕರ್ನಾಟಕ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾದ ಜೀಲಾನಿ ಯವರು ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿದರು

. ಇಲಾಖೆಯಿಂದ ಶಿಕ್ಷಣಕ್ಕೆ ನೀಡುವ ಸೌಲಭ್ಯ, ಪ್ರೊತ್ಸಾಹ ದ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು. ಕರ್ನಾಟಕ ಅಲ್ಪ ಸಂಖ್ಯಾತ ರ ಕಲ್ಯಾಣ ಇಲಾಖೆ ವತಿಯಿಂದ ಮೀಫ್ ಸಹಯೋಗದಲ್ಲಿ ಐಎಎಸ್, ಐಪಿಎಸ್,ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ, ನೀಟ್ ಸಿಇಟಿ ಕೋಚಿಂಗ್ ಸೆಂಟರ್ ಪ್ರಾರಂಬಿಸುವ ಬಗ್ಗೆ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮೂಲ ಸೌಲಭ್ಯ ಅಭಿವೃದ್ಧಿಗೆ ಅನುದಾನ ಒದಗಿಸುವ ಬಗ್ಗೆ ಮಾತುಕತೆ ನಡೆಸಲಾಯಿತು
ಈ ಸಂದರ್ಭದಲ್ಲಿ ಪ್ರಶಸ್ತಿ ಪಡೆದ ಮರುದಿನ ವೇ ಇಲಾಖೆಗೆ ಭೇಟಿ ನೀಡಿ ಸಮುದಾಯದ ಶಿಕ್ಷಣ ಕಾಳಜಿಯನ್ನು ತೋರಿಸಿದ ಮೀಫ್ ಸಂಸ್ಥೆಯ ಪದಾಧಿಕಾರಿಗಳನ್ನು ನಿರ್ದೇಶಕರು ಅಭಿನಂದಿಸಿದರು
ಉಪಾಧ್ಯಕ್ಷ ಕೆ. ಎಂ. ಮುಸ್ತಫ, ಸಮಿತಿ ಸದಸ್ಯರುಗಳಾದ ಇಲ್ಯಾಸ್ ಕಾಟಿಪಳ್ಳ, ಹೈದರ್ ಮರ್ದಾಳ ಮೊದಲಾದವರು ಉಪಸ್ಥಿತರಿದ್ದರು

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ