ಬೆಂಗಳೂರು: ಲುಲು ಮಾಲ್‌‌‌ನಲ್ಲಿ (Lulu Mall) ಹಿರಿ ವಯಸ್ಸಿನ ಕಾಮುಕನೊಬ್ಬನ ಕಾಮವಾಂಛೆಗೆ ಇಡೀ ಕರ್ನಾಟಕವೇ (Karnataka) ಕಿಡಿಕಾರಿತ್ತು. ಮಹಿಳೆಯ (Woman) ಜೊತೆ ನಡೆದುಕೊಂಡ ಅಸಭ್ಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ವಿಡಿಯೋ (CCTV Video) ಆಧರಿಸಿ ಕೇಸ್ ದಾಖಲಿಸಿಕೊಂಡಿದ್ದ ಮಾಗಡಿ ರೋಡ್ ಪೊಲೀಸರು (Magadi Road Police), ಈತ ನಿವೃತ್ತ ಶಿಕ್ಷಕ ಅಶ್ವತ್ಥ್ ನಾರಾಯಣ ಅನ್ನೋದನ್ನ ಪತ್ತೆ ಹಚ್ಚಿದ್ದರು. ಈಗ ಪೊಲೀಸರು (Police) ಆರೋಪಿಯ ಇನ್ನಷ್ಟು ಕುಚೇಷ್ಠೆಗಳನ್ನೂ ಹೊರಗೆಡವಿದ್ದಾರೆ. ಲುಲು ಮಾಲ್‌‌‌ನಲ್ಲಿ ಆರೋಪಿ ನಿವೃತ್ತ ಶಿಕ್ಷಕ ಅಶ್ವತ್ಥ ನಾರಾಯಣ ಏನೇನೆಲ್ಲಾ ಮಾಡಿದ್ದ ಅನ್ನೋದನ್ನ ಪೊಲೀಸರು ಸುಮಾರು 45ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಮೂಲಕ ಪರಿಶೀಲಿಸಿದ್ದಾರೆ. ಆತ ಸುಮಾರು 3 ಗಂಟೆಗಳ ಕಾಲ ಮಾಲ್‌‌‌ನಲ್ಲಿದ್ದು, ಅಲ್ಲಿ ಇನ್ನೂ 7-8 ಮಹಿಳೆಯರ ಜೊತೆಗೂ ಹೀಗೇ ಅಸಭ್ಯವಾಗಿ ವರ್ತಿಸಿದ್ದ.

ಮಹಿಳೆಯರು ನಿಂತಿದ್ದರೆ ಹಿಂದಿನಿಂದ ಹೋಗಿ ಎಲ್ಲೆಂದರಲ್ಲಿ ಮುಟ್ಟಿ ಕಾಟ ಕೊಟ್ಟಿದ್ದ. ಈ ವಿಡಿಯೋಗಳನ್ನ ನೋಡಿದ ಮೇಲೆ ಪೊಲೀಸರು ಆತ ಈ ಹಿಂದೆ ಕೆಲಸ ಮಾಡ್ತಿದ್ದ ಶಾಲೆಯಲ್ಲೂ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಈ ವಿಡಿಯೋ ಬಯಲಿಗೆ ತಂದಿದ್ದು ಯಶ್ವಂತ್ ಅನ್ನೋ ಯುವಕ. ಇನ್ಮುಂದೆ ಯಾರೇ ಕಾಮುಕರು ಇಂತಾ ಕೃತ್ಯವೆಸಗಿದರೆ ಪೊಲೀಸರಿಗೆ ಮಾಹಿತಿ ನೀಡಲು ಯುವಕ ಯಶ್ವಂತ್ ಕೋರಿದ್ದಾರೆ.

ಸದ್ಯ ಆರೋಪಿ ನಿವೃತ್ತ ಶಿಕ್ಷಕ ಅಶ್ವತ್ಥ್ ನಾರಾಯಣ್ ಜಾಮೀನಿನ ಮೇಲೆ ಹೊರಬಂದಿದ್ದಾರೆ.. ಸಿಸಿ ಕ್ಯಾಮರಾದ ಪರಿಶೀಲನೆ ಬಳಿಕ ನೊಟೀಸ್ ಕೊಟ್ಟು ಅಶ್ವತ್ ನಾರಾಯಣ್ ಹೇಳಿಕೆ ದಾಖಲಿಸಲು ಮಾಗಡಿ ರೋಡ್ ಪೊಲೀಸರು ಮುಂದಾಗಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ