ಸುಳ್ಯ : ಕಂಠ ಪೂರ್ತಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಮಾರಕಾಸ್ತ್ರದಿಂದ ನೆರೆಮನೆಯವನ ಬೆನ್ನಿಗೆ ಕಡಿದಿರುವ ಘಟನೆ ದುಗಲಡ್ಕದ ನೀರಬಿದಿರೆ ಸಮೀಪ ನಡೆದಿದೆ.

ಜಾನ್ ಡಿಸೋಜಾ ಎನ್ನುವ ವ್ಯಕ್ತಿಯ ಬೆನ್ನಿಗೆ, ಪ್ರಶಾಂತ್ ಡಿಸೋಜಾ ಎಂಬ ವ್ಯಕ್ತಿ ಮದ್ಯದ ನಶೆಯಲ್ಲಿ ದಾಳಿ ಮಾಡಿದ್ದಾನೆ ಎನ್ನಲಾಗಿದೆ. ಸದ್ಯ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ