ಅರಂತೋಡು ಗ್ರಾಮದ ಅಡ್ತಲೆ ನಿವಾಸಿ ಮೋಹನ್ ಪಂಜದಬೈಲುರವರ ತೋಟದಿಂದ ಅಡಿಕೆ ಕಳ್ಳತನ ಆಗಿರುವ ಘಟನೆ ನಿನ್ನೆ ನಡೆದಿದೆ. ಮೋಹನ್ ರವರು ಇಂಟರ್ ಮಂಗಳ ಅಡಿಕೆ ಕೃಷಿ ಮಾಡಿದ್ದು ಅಡಿಕೆ ಗೊನೆಗಳು ಕೈಗೆಟುಕುವ ಎತ್ತರದಲ್ಲಿದೆ. ಐದಾರು ಅಡಿಕೆ ಮರಗಳಿಂದ ಪೂರ್ತಿ ಅಡಿಕೆ ಗೊನೆಗಳನ್ನು, ಇನ್ನು ಕೆಲವು ಮರಗಳಿಂದ ಹುಡುಕಿ ಹಣ್ಣಾದ ಅಡಿಕೆಗಳನ್ನು ಕಳ್ಳತನ ಮಾಡಲಾಗಿದೆ.

ಮೋಹನ್ ರವರು ಪೊಲೀಸ್ ಕಂಪ್ಲೇಂಟ್ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಅತ್ಯಂತ ಕಷ್ಟಪಟ್ಟು ಬೆಳೆದ ಫಸಲನ್ನು ಕಳ್ಳರು ಕಳ್ಳತನ ಮಾಡಿರುವುದರಿಂದ ನೊಂದಿರುವ ಇವರು ಅಡಿಕೆ ಕದ್ದವರಿಗೆ ಮತ್ತು ಕದ್ದ ಮಾಲನ್ನು ವ್ಯಾಪಾರ ಮಾಡಿದವರಿಗೆ ಶಿಕ್ಷೆ ದೊರೆಯಲೆಂದು ಪ್ರಾರ್ಥಿಸಿ ಕೆಲವು ಕಾರಣಿಕ ಹಾಗೂ ಸತ್ಯ ಸ್ಥಳಗಳಲ್ಲಿ ಈ ಬಗ್ಗೆ ಹರಿಕೆ ಹೇಳುವುದಗಿಯೂ ತಿಳಿಸಿದ್ದಾರೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ