Advertisement
ಸುಳ್ಯ: ಅಡ್ಕಾರ್ ಬಳಿ ಮಾವಿನಕಟ್ಟೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನವೊಂದು ರಸ್ತೆ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದ ಘಟನೆ ಜೂ-30ರಂದು ಅಪರಾಹ್ನ ಸಂಭವಿಸಿದೆ. ಕನಕಮಜಲಿನ ಅಜಿತ್ ಕಾರಿಂಜ ಎಂಬವರು ತಮ್ಮ ಬೊಲೆರೊ ವಾಹನದಲ್ಲಿ ಸುಳ್ಯದಿಂದ ಕನಕಮಜಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಡ್ಕಾರಿನ ಮಾವಿನಕಟ್ಟೆ ಬಳಿ, ಸುರಿಯುತ್ತಿರುವ ಬಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದ್ದು, ಚಾಲಕ ಅಜಿತ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಬೊಲೆರೊ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.
Advertisement