ಸುಳ್ಯ: ಇಲ್ಲಿನ‌ ಹಳೆಗೇಟು ಪೆಟ್ರೋಲ್ ಪಂಪ್‌ಬಳಿ ಭೀಕರ ಅಪಘಾತ ಸಂಭವಿಸಿದೆ. ರಿಕ್ಷಾ ಮತ್ತು ಓಮ್ನಿ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ರಿಕ್ಷಾ ಚಾಲಕ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಜಾಲ್ಲೂರಿನಿಂದ ಸುಳ್ಯಕ್ಕೆ ಪ್ರಯಾಣಿಕರೋರ್ವರನ್ನು ಬಿಟ್ಟು ಹಿಂತಿರುಗುತ್ತಿದ್ದ ಜಾಲ್ಲೂರು ಗ್ರಾಮದ ಅರಿಯಡ್ಕದ ನಿವಾಸಿ ಬಾಬು ಪಾಟಾಳಿ ಎಂಬವರು ಚಲಾಯಿಸುತ್ತಿದ್ದ ಅಟೋರಿಕ್ಷಾ ಹಳೆಗೇಟು ಪೆಟ್ರೋಲ್ ಪಂಪ್ ಬಳಿ ಮುಂಭಾಗದಿಂದ ಬರುತ್ತಿದ್ದ ಓಮ್ಮಿಗೆ ಢಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಚಾಲಕ ಬಾಬು ಪಾಟಾಳಿ ಅವರಿಗೆ ಏಟಾಗಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸಹ ಪ್ರಯಾಣಿಕ ಗಣಪತಿ ಭಟ್ ಎಂಬವರು ಗಾಯಗೊಂಡಿದ್ದು, ಸುಳ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ