ಸುಳ್ಯ: ಇಲ್ಲಿನ ಹಳೆಗೇಟಿ ನಲ್ಲಿ ಆಟೋ ರಿಕ್ಷಾ ಹಾಗೂ ಓಮ್ನಿ ನಡುವೆ ನಡೆದ ಅಪಘಾತದಲ್ಲಿ ನಿಧನರಾದಂತಹ, ಹಿರಿಯ ಆಟೋ ಚಾಲಕ ಬಾಬು ಪಾಟಾಳಿ ಅರಿಯಡ್ಕ ಯವರ ಪಾರ್ಥಿವ ಶರೀರದ ಮೆರವಣೆಗೆ ಸುಳ್ಯ ದಿಂದ ಜಾಲ್ಸೂರು ತನಕ ನಡೆಯಿತು.

ಸಹೋದ್ಯೋಗಿಯ ವಿಧಾಯಕ್ಕೆ ಸಂತಾಪ ಸೂಚನೆ ನೀಡುವ ಮೂಲಕ ಜಾಲ್ಸೂರು ಆಟೋ ರಿಕ್ಷಾ ಚಾಲಕರು‌ ಹಾಗೂ ಊರವರು ಜೊತೆ ಸೇರಿದ್ದರು. ಪಾರ್ಥೀವ ಶರೀರವನ್ನು ಅಂಬ್ಯುಲೆನ್ಸ್ ಮೂಲಕ ಕೊಂಡೊಯ್ಯುವಾಗ, ಹಿಂಬದಿಯಲ್ಲಿ ಅನೇಕ ಆಟೋ ರಿಕ್ಷಾ ಚಾಲಕರು ಮೆರವಣಿಗೆ ರೂಪದಲ್ಲಿ ಸಾಗಿ, ತಮ್ಮ ಸಂತಾಪ ಸೂಚಿಸಿದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ