ನಿಯಮ ಏನು ಹೇಳುತ್ತದೆ?
ವಿಕೆಟ್‌ ಪತನದ ನಂತರ ಅಥವಾ ಬ್ಯಾಟರ್‌ ನಿವೃತ್ತಿ ಹೊಂದಿದ ಬಳಿಕ 2 ನಿಮಿಷದ ಒಳಗಡೆ ಮುಂದಿನ ಎಸೆತವನ್ನು ಎದುರಿಸಬೇಕು. ಈ ಅವಧಿಯಲ್ಲಿ ಚೆಂಡು ಸ್ವೀಕರಿಸದೇ ಇದ್ದರೆ ಫೀಲ್ಡಿಂಗ್‌ ನಡೆಸುವ ತಂಡ ಟೈಮ್ಡ್‌ ಔಟ್‌ಗೆ ಮನವಿ ಮಾಡಬಹುದು. ಅಂಪೈರ್‌ ನೇರವಾಗಿ ಔಟ್‌ ನೀಡಲು ಬರುವುದಿಲ್ಲ. ಬೌಲಿಂಗ್‌ ನಡೆಸುವ ತಂಡದ ನಾಯಕ ಮನವಿ ಮಾಡಿದರೆ ಮಾತ್ರ ಟೈಮ್ಡ್‌ ಔಟ್‌ ನೀಡಬಹುದು.
ಏಕದಿನ, ಟೆಸ್ಟ್‌, ಟಿ20 ಪಂದ್ಯಗಳಿಗೆ ಸಮಯ ನಿಗದಿಯಾಗಿರುತ್ತದೆ. ಒಂದು ವೇಳೆ ಸಮಯ ಮೀರಿಯೂ ಬೌಲಿಂಗ್‌ ಮಾಡಿದರೆ ನಾಯಕನಿಗೆ ದಂಡ ವಿಧಿಸಲಾಗುತ್ತದೆ. ಏಕದಿನ ಕ್ರಿಕೆಟ್‌ನಲ್ಲಿ ಬೌಲಿಂಗ್‌ ತಂಡ 50 ಓವರ್‌ಗಳನ್ನು 3 ಗಂಟೆ 50 ನಿಮಿಷದಲ್ಲಿ ಎಸೆಯಬೇಕಾಗುತ್ತದೆ. ಟಿ20ಯಲ್ಲಿ ಬೌಲಿಂಗ್‌ ತಂಡ 20 ಓವರ್‌ಗಳನ್ನು 1 ಗಂಟೆ 25 ನಿಮಿಷದಲ್ಲಿ 20 ಓವರ್‌ ಎಸೆಯಬೇಕಾಗುತ್ತದೆ. ಈ ಕಾರಣಕ್ಕೆ ಬ್ಯಾಟರ್‌ಗಳು ಸಮಯ ತೆಗೆದುಕೊಂಡರೆ ಬೌಲಿಂಗ್‌ ನಡೆಸುವ ತಂಡ ಅಂಪೈರ್‌ ಜೊತೆ ಟೈಮ್ಡ್‌ ಔಟ್‌ ಮನವಿ ಮಾಡಲು ಅವಕಾಶ ಸಿಗುತ್ತದೆ.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ