ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜು ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ರಸಾಯನಶಾಸ್ತ್ರ ವಿಭಾಗಗಳ ವತಿಯಿಂದ ಜೀವವಿಜ್ಞಾನ ಪದವಿ ವಿದ್ಯಾರ್ಥಿಗಳೊಂದಿಗೆ ನವೆಂಬರ್ 06 ಸೋಮವಾರದಂದು ಕೆವಿಜಿ ಆಯುರ್ವೇದ ಫಾರ್ಮಸಿಗೆ ಭೇಟಿ ನೀಡಲಾಯಿತು.

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ ವಿ ಮಾರ್ಗದರ್ಶನದೊಂದಿಗೆ ಏರ್ಪಡಿಸಿದ ಭೇಟಿಯಲ್ಲಿ ಆಯುರ್ವೇದ ಫಾರ್ಮಸಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಾಲೇಜಿನ ರಸಶಾಸ್ತ್ರ ಮತ್ತು ಬೈಷಜ್ಯಕಲ್ಪನ ವಿಭಾಗ ಮುಖ್ಯಸ್ಥರಾದ ಡಾ. ಪುರುಷೋತ್ತಮ ಕೆ. ಜಿ ಫಾರ್ಮಸಿಯ ಬಗ್ಗೆ ವಿವರಣೆ ನೀಡಿ ಭೇಟಿಗೆ ವ್ಯವಸ್ಥೆ ಮಾಡಿಕೊಟ್ಟರು.

ಇಲ್ಲಿ ತಯಾರಾಗುತ್ತಿರುವ ಹಲವಾರು ಆಯುರ್ವೇದ ಔಷಧಗಳು, ತಯಾರಿಕಾ ವಿಧಾನಗಳು, ಅಗತ್ಯ ಸಲಕರಣೆಗಳು ಮತ್ತು ಫಾರ್ಮಸಿ ನಿರ್ವಹಣೆ ಬಗ್ಗೆ ಉಪನ್ಯಾಸಕರಾದ ಡಾ. ಗೋಪಾಲಕೃಷ್ಣರವರು ಸಂಪೂರ್ಣ ವಿವರಣೆಗಳನ್ನು ನೀಡಿದರು. ವಿದ್ಯಾರ್ಥಿಗಳು ಔಷದ ತಯಾರಿಕಾ ಘಟಕವನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಉಪನ್ಯಾಸಕರಾದ ಡಾ.ಹರ್ಷಿತಾ ಮತ್ತು ಡಾ. ಪಾವನ, ಕ್ವಾಲಿಟಿ ಕಂಟ್ರೋಲ್ ವಿಭಾಗದ ನಿರ್ವಾಹಕರಾದ ಶುಭಶ್ರೀ, ವಿದ್ಯಾ ಮಾಧವಿ ಮತ್ತು ರತನ್ ಸಹಕರಿಸಿದರು.

ಈ ಭೇಟಿಯ ನೇತೃತ್ವವನ್ನು ಎನ್ನೆಂಸಿ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಕುಲದೀಪ್ ಪೆಲ್ತಡ್ಕ ಮತ್ತು ಕೃತಿಕಾ ಕೆ ಜೆ ಹಾಗೂ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕರಾದ ಹರ್ಷಕಿರಣ ವಹಿಸಿದ್ದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ